‘ಕಾಡುವ ಕತೆಗಳು’ ತೆಲುಗು ಕವಿ ಸಲೀಂ ಅವರ ತೆಲುಗು ಸಣ್ಣಕತೆಗಳ ಕನ್ನಡಾನುವಾದ. ಅನುವಾದಕಾರಿ ಕನ್ನಡ ಓದುಗರಿಗೆ ಚಿರಪರಿಚಿತರಾಗಿರುವ ಧನಪಾಲ ನಾಗರಾಜಪ್ಪ ಅವರು ಈ ಕೃತಿಯನ್ನು ಅನುವಾದಿಸಿದ್ದಾರೆ. ಈ ಸಂಕಲನದ ಎಲ್ಲಾ ಕಥೆಗಳು ಯಾವುದೇ ಕಾರಣಕ್ಕೊ ಎಲ್ಲಿಯೂ ನಿಲ್ಲಿಸದೆ, ಬೇಸರಿಸದೆ ಓದಿಸಿಕೊಂಡು ಹೋಗುತ್ತವೆ. ಕಥಾ ಹಂದರದ ದೃಷ್ಟಿಯಿಂದ ನೋಡುವುದಾದರೆ ಪಾತ್ರಗಳು, ಸನ್ನಿವೇಶಗಳು ಮತ್ತು ಸಂಭಾಷಣೆ, ಸರಳ ನಿರೂಪಣೆಯ ಕಾರಣದಿಂದಾಗಿ ಇಷ್ಟವಾಗುತ್ತವೆ. ಕನ್ನಡ ನೆಲದ್ದೇ ಆದ ಕಥೆಗಳಿವು ಅಂತ ಅನಿಸುವಲ್ಲಿ ಅನುವಾದಕರು ಯಶಸ್ವಿಯಾಗಿದ್ದಾರೆ. ಅದಕ್ಕೆ ಪೂರಕವಾಗಿ ಸಂವೇದನಾಶೀಲ ಕಥೆಗಳನ್ನು ಅನುವಾದಿಸುವ ಮೂಲಕ ಈ ಕಾಲದ ಸಾಹಿತ್ಯಿ ಹಾಗೂ ಸಾಂಸ್ಕೃತಿಕ ಪರಿವೇಷಕ್ಕೆ ಮುಖಾಮುಖಿಯಾಗಿ ಬಹುತ್ವ ಕಟ್ಟುವ ಮಾರ್ಗವಾಗಿಸಿಕೊಂಡಿದ್ದಾರೆ.
©2024 Book Brahma Private Limited.