ಮ್ಯಾಕ್ಸಿಂ ಗೋರ್ಕಿ ಅವರು ರಷ್ಯಾದ ಸುಪ್ರಸಿದ್ಧ ಕಥೆ-ಕಾದಂಬರಿಕಾರ. ‘ಓಲ್ಡ್ ಇಸರ್ಜಿಲ್’ ನಿಂದ ಮೂರು ಹಾಗೂ ‘ಟೇಲ್ಸ್ ಆಫ್ ಇಟಲಿ’ಯಿಂದ ನಾಲ್ಕು ಕಥೆಗಳನ್ನು ಆಯ್ದು ಕೆ.ವಿ. ಸುಬ್ಬಣ್ಣ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಗೋರ್ಕಿಯ ಕಥೆಗಳು.
ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾದ ಈ ಕಥೆಗಳನ್ನು ಜನಶಕ್ತಿ ಪ್ರಕಾಶನ (1955) ಪ್ರಕಟಿಸಿತ್ತು. ಮತ್ತೊಂದು ಕಥೆ ಸೇರಿಸಿ ಸುಬ್ಭಣ್ಣನವರು ಪ್ರಕಟಿಸಿದರು. ಈಗಿರುವುದು ಮೂರನೇ ಮುದ್ರಣ. 1971ರಲ್ಲಿ ಈ ಕೃತಿಗೆ ಸೋವಿಯತ್ ಲ್ಯಾಂಡ್ ನ ನೆಹರೂ ಪ್ರಶಸ್ತಿ ದೊರಕಿದೆ. ಕೃತಿಯಲ್ಲಿ ಜಂಭದ ಮರಿ, ಬದುಕಿನ ಹಾಡು ಪಾಡು, ಜ್ವಲಂತ ಹೃದಯ, ಕೂಲಿ ಹೇಳಿದ ಕಥೆ, ಮುದುಕ ಹೇಳಿದ ಕಥೆ, ತೈಮೂರನ ಸೋಲು ಹಾಗೂ ತಾಯಿಯ ಒಲವು-ಈ ಕಥೆಗಳ ಅನುವಾದ ಒಳಗೊಂಡಿದೆ.
©2024 Book Brahma Private Limited.