ವಿಶ್ವಕಥಾಕೋಶದ 9ನೇ ಸಂಪುಟದಲ್ಲಿ ರಷ್ಯ ಹಾಗೂ ನೆರೆ-ಹೊರೆಯ ದೇಶಗಳ ಕತೆಗಳಿವೆ. ಹೆಜ್ಜೆ ಗುರುತು- ಲೆವ್ ತಲ್‌ಸ್ತೊಯ್, ಕ್ರಿಸ್‌ಮಸ್ ವೃಕ್ಷ ಮತ್ತು ಮದುವೆ -ಫ್ಯೋದರ್ ದಸ್ತಯೆವಸ್ಕಿ, ಗಂಟೆ ಬಾರಿಸುವ ಮುದುಕ -ವ್ಲದಿಮೀರ್ ಕರಲ್ಯೆಂಕ, ಪಣ -ಆ೦ತೋನ್ ಚೇಹವ್ ಮಕರ್, ಚುದ್ರ -ಮಕ್ಸಿಮ್ ಗೋರ್ಕಿ, ಪ್ರಶಾ೦ತ ಹುಲ್ಲುಗಾವಲು -ಮಿಖೈಯಿಲ್ ಶೋಲಹೆವ್, ಚಳಿಗಾಲದ ಒಂದು ರಾತ್ರಿ -ರುಸ್ತಮ್ ಇಬ್ಬಗಿಂಬೈಕವ್, ಮೂರನೆಯ ಸಹಾಯಕ -ಕಾನ್‌ಸ್ತಂತಿನ್ ಸಿಮನವ್, ಸೇಬಿನ ಮರ -ನಿಕಲೈ ತೀಖನವ್, ಗೇಟಿನ ಬಳಿ ಮೂವರು ಹುಡುಗರು -ವಿಯರ್‍ರಾ ಪನೋವ, ದೃಷ್ಟಿದಾತ -ಅಬ್ಬುಲ್ಲಾ ಕಹ್ಹಾರ್ ದಿಗ್ರಾಸ್ಪೊ -ಇಸ್ಸಾಕ್ ಬಬಿಲ್, ಅಂತ್ಯವಿಲ್ಲದ ಪ್ರೇಮಗೀತೆ -ಅಲ್‌ಬೆರ್‍ತ್ ಬೆಲ್ಸ್, ನಿಷಿದ್ಧ ಫಲ -ಫಜಿಲ್ ಇಸ್ಕಂದರ್ ಹಾಯಿಪಟಗಳು -ಯೂರಿಹ್ ಋತ್‌ಹೆವು, ಸೈನಿಕನ ಮಗ -ಜಿ೦ಗೀಜ್ ಐತ್‌ಮಾತವ್ ದೇವಶಿಲ್ಪಿ -ಅನೀಲ್ಯುಸ್ ಮಾರ್ಕೇವಿಚೂಸ್.
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MORE