‘ಬಿಳಿ ಕೊಕ್ಕರೆ ಹಾಗೂ ವಿಶ್ವದ ಆಖ್ಯಾಯಿಕೆಗಳು’ ಗೌರೀಶ ಕಾಯ್ಕಿಣಿ ಅವರು ಅನುವಾದಿಸಿರುವ ಕತಾಸಂಕಲನ. ಈ ಕೃತಿಗೆ ಮೊದಲ ಮಾತುಗಳನ್ನು ಡಾ. ಕೆ. ಮರುಳಸಿದ್ಧಪ್ಪ ಅವರು ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ಬಿಳಿಕೊಕ್ಕರೆ ಮತ್ತು ವಿಶ್ವದ ಆಖ್ಯಾಸಿಕೆಗಳು ಕ್ರಮವಾಗಿ ಜಗತ್ತಿನ ಅತ್ಯುತ್ತಮ ಕತೆಗಳು ಮತ್ತು ಜಗತ್ತಿನ ಕ್ಲಾಸಿಕ್ ಎನ್ನಬಹುದಾದ ಆಖ್ಯಾಯಿಕೆಗಳನ್ನು ಒಳಗೊಂಡಿರುವ ಕೃತಿಯಾಗಿದೆ. ಅಮೇರಿಕಾ ಮತ್ತು ಇಂಗ್ಲೆಂಡಿನ ಪ್ರಸಿದ್ಧ ಕತೆಗಾರರು ಮತ್ತು ಗ್ರೀಕ್ ಮತ್ತು ಚೀನಾ, ಅಮೇರಿಕಾದ ಶ್ರೇಷ್ಠ ಲೇಖಕರ ಕೃತಿಗಳಿಂದಾಯ್ದ ಇಪ್ಪತ್ತು ಆಖ್ಯಾಯಿಕೆಗಳು ಮತ್ತು ಆರು ಕಥೆಗಳು ಇಲ್ಲಿವೆ. ಈ ಕತೆಗಳು ಮತ್ತು ಆಖ್ಯಾಯಿಕೆಗಳಲ್ಲಿ ಆತ್ಮಚರಿತ್ರಾತ್ಮಕ ಸ್ವರೂಪದ ಕತೆಗಳಿವೆ. ಆಯಾ ದೇಶಗಳ ಜನಜೀವನದ ಬದುಕಿನ ಸ್ವರೂಪದ ಚಿತ್ರಣವಿದೆ. ಮನುಷ್ಯ-ಮನುಷ್ಯರೊಳಗಿನ ಸಂಘರ್ಷಕ್ಕಿಂತ ನಿಸರ್ಗದಲ್ಲಿರುವ ಹಿಂಸಾತ್ಮಕ ಹೋರಾಟಗಳು ಕಡಿಮೆ ಮಟ್ಟದವು. ಮನುಷ್ಯ ಪ್ರಾಣಿಗಳಿಗಿಂತ ಹೆಚ್ಚು ಹಿಂಸಾಮಯಿ ಎಂಬುದರ ಚಿತ್ರಣವಿದೆ. ಮಾನವ ಮತ್ತು ವಲಯದ ಮನೋಹರವಾದ ಹೋರಾಟವಿದೆ. ದೈವವು ಮಾನವನನ್ನು ಆಡಿಸಿ ಕೊಲ್ಲುವ ವಿಧಿವಿಲಾಸದ ಸ್ವರೂಪದ ವಿವರಗಳಿವೆ. ಒಂದು ಇಕ್ಕಟ್ಟಿನ ಸಂದರ್ಭಕ್ಕೆ ಎಲ್ಲಾ ಆಗುಹೋಗುಗಳನ್ನು ಹಿಗ್ಗಾಮುಗ್ಗಾ ಹೊಂದಿಸಿಕೊಳ್ಳುವ ಹಠ ಮತ್ತು ಅದರಿಂದಾಗುವ ಹಿಂಸೆಯ ಸ್ವರೂಪದ ಧ್ವನಿಪೂರ್ಣವಾದ ವಿವರಗಳಿವೆ ಎಂದಿದ್ದಾರೆ ಡಾ.ಕೆ. ಮರುಳಸಿದ್ದಪ್ಪ. ಈ ಸಂಕಲನದಲ್ಲಿ ಬಿಳಿಕೊಕ್ಕರೆ ವಿಭಾಗದಲ್ಲಿ ಬಿಳಿ ಕೊಕ್ಕರೆ, ವಿಧರ್ಮಿ, ಹಿರಿಯಾಸೆಯ ಅತಿಥಿ, ಮಹಾ ಶಿಲಾಮುಖ, ಆ ಕರಡಿ, ಔಲಕ್ರೀಕ ಸೇತುವೆಯಲ್ಲಿ ನಡೆದ ಘಟನೆ ಎಂಬ ಆರು ಕತೆಗಳು ಸಂಕಲನಗೊಂಡಿದ್ದರೆ. ವಿಶ್ವದ ಆಖ್ಯಾಯಿಕೆಗಳು ವಿಭಾಗದಲ್ಲಿ ಈಡಿಪಸ್ ದೊರೆ, ರಿಪ್ ವಾನ್ ವಿಂಕಲ್, ನಾರ್ಕಿಸಸ್ ಮತ್ತು ಎಕೊ, ರೋಮನ್ ವೀರ-ಹೊರೇಶಸ್, ಪಂಡಿತ ಫಾಸ್ಟ್, ಆಂಡ್ರೊಕ್ಲಿಸ್ ಮತ್ತು ಸಿಂಹ, ಹೆಣ್ಣಿನ ದೌರ್ಬಲ್ಯ, ಜೋನ ಆಫ್ ಆರ್ಕ, ಪ್ರೊಕೃಸ್ಟೀಸ್ ನ ಮಂಚ, ಇಣಕಿ ನೋಡಿದ ಟಾಂ, ರಾಜಾ ಆರ್ಥರನ ದುಂಡು ಮೇಜು, ಹಿಯವಥಾ, ಅನುಪ ಮತ್ತು ಬಾತಾ, ಅಂದಗೇಡಿ ಬಾತುಮರಿ, ಆಕಾಶ ಬುಟ್ಟಿಯ ಪುರಾಣ, ಬರ್ಮಿಸೈದ ಮೇಜವಾನಿ, ಪೆಂಡೊರಾಳ ಪೆಟ್ಟಿಗೆ, ಓರ್ಫಿಯಸ್ ಮತ್ತು ಯುರಿಡೈಕ್, ಟ್ರೋಜನ್ ಕುದುರೆ ಮತ್ತು ವಿಲಿಯಂ ಟೆಲ್ ಎಂಬ ಕತೆಗಳು ಸಂಕಲನಗೊಂಡಿವೆ.
ಸಾಹಿತಿ ಗೌರೀಶ್ ಕಾಯ್ಕಿಣಿ ಅವರು 1912 ಸೆಪ್ಟೆಂಬರ್ 12ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಠಲರಾವ್ ತಹಸೀಲ್ದಾರರು, ತಾಯಿ ಸೀರಾಬಾಯಿ. ಗೌರೀಶ ಹುಟ್ಟಿದ ಮೂರು ತಿಂಗಳಲ್ಲಿ ತಂದೆ ತೀರಿಕೊಂಡರು. ಗೋಕರ್ಣ, ಕುಮುಟಾ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದು, ಮುಂದಿನ ಶಿಕ಼್ಣ ಕುಮಟಾ ಹಾಗೂ ಧಾರವಾಡದಲ್ಲಿ ಮುಂದುವರಿಯಿತು. ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತ್ಯಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ಅವರು ಹಿಂದಿಯಲ್ಲಿ ವಿಶಾರದರೂ ಆಗಿದ್ದರು. ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಗೌರೀಶರು 1930ರಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ’ಶಾಂಡಿಲ್ಯ ಪ್ರೇಮಸುಧಾ’ ಕನ್ನಡ ಹಾಗೂ ಮರಾಠಿ ...
READ MORE