ಇತ್ತ ಹಾಯಲಿ ಚಿತ್ತ

Author : ಕವಿತಾ ಹೆಗಡೆ

Pages 90

₹ 94.00




Year of Publication: 2024
Published by: ವೀರಲೋಕ ಬುಕ್ಸ್
Address: ವೀರಲೋಕ ಬುಕ್ಸ್‌ ಪ್ರೈವೇಟ್‌ ಲಿಮಿಟೆಡ್‌, 207, 2ನೇ ಮಹಡಿ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018
Phone: +91 7022122121

Synopsys

‘ಇತ್ತ ಹಾಯಲಿ ಚಿತ್ತ’ ಕವಿತಾ ಹೆಗಡೆ ಅಭಯಂ ಅವರ ಅನುವಾದಿತ ಕಥೆಗಳಾಗಿವೆ. ಇದಕ್ಕೆ ಲೇಖಕರ ಬೆನ್ನುಡಿ ಬರಹವಿದೆ; “ಉತ್ತರ ಪರ್ವ”ದಲ್ಲಿ ಆಯ್ಕೆಯಾದ ಅನುವಾದಿತ ಕಥೆಗಳ ಈ ಸಂಕಲನ ಒಂದು ತಾಜಾ ಅನುಭೂತಿಯನ್ನು ಎದುರು ನೋಡುತ್ತಿರುವ ಅಕ್ಷರಮೋಹಿಗಳ ಜೋಳಿಗೆಗೆ ಮುಡಿಪಾಗಿಟ್ಟ ಹೋಳಿಗೆ. ಉತ್ತರ ಕನ್ನಡದ ಹಚ್ಚ ಹಸಿರಿನ ನಡುವೆ ಅರಳಿದ ಮುಗ್ಧ ಮತ್ತು ಬಯಲು ಸೀಮೆಯ ನಿರಾಡಂಬರದಲ್ಲೂ ಅಪ್ಪಟ ಹೃದಯ ಶ್ರೀಮಂತಿಕೆ ತೋರುವ ಜೀವಗಳ ನೋವು-ನಲಿವಿನ ಹೃದಯಸ್ಪರ್ಶಿ ಕಥೆಗಳ ಕಣಜ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.

About the Author

ಕವಿತಾ ಹೆಗಡೆ

ಉತ್ತರ ಕನ್ನಡದ ಕುಮಟಾ ತಾಲೂಕಿನ ಕತಗಾಲದಲ್ಲಿ ಜನನ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಹುಟ್ಟೂರಿನಲ್ಲಿ. ಕುಮಟಾದ ಡಾ. ಎ ವಿ ಬಾಳಿಗಾ ಮಹಾವಿದ್ಯಾಲಯದಲ್ಲಿ ಪದವಿ. ಮೈಸೂರಿನಲ್ಲಿ ಡಿಪ್ಲೊಮಾ ಇನ್ ಫ್ಯಾಷನ್ ಟೆಕ್ನಾಲಜಿ. ಹುಬ್ಬಳ್ಳಿಯಲ್ಲಿ ಎಂ ಎ (ಇಂಗ್ಲಿಷ್ ) ಹಾಗೂ ಬಿ ಎಡ್ ಪದವಿ. ಬಾಲ್ಯದಿಂದಲೂ ಪ್ರಥಮ ಸ್ಥಾನದೊಂದಿಗೆ ತರ‍್ಗಡೆ. ಸಾಹಿತ್ಯದಲ್ಲಿ ಆಸಕ್ತಿ ಹಾಗೂ ರಚನೆ. ಪ್ರಸ್ತುತ ಹುಬ್ಬಳ್ಳಿಯ ಕೆ ಎಲ್ ಇ ಆಂಗ್ಲ ಮಾಧ್ಯಮ (ಸಿಬಿಎಸ್ಇ) ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. 2020ರಲ್ಲಿ ಹೊರಬಂದ "ದ ನೆಸ್ಟೆಡ್ ಲವ್" ಇವರ ಪ್ರಥಮ ಇಂಗ್ಲಿಷ್ ಕಥಾ ಸಂಕಲನ. ...

READ MORE

Related Books