‘ಓಶೋ ಹೇಳಿದ ಬುದ್ಧನ ಕಥೆಗಳು’ ಟಿ.ಎಸ್. ವಾಸುದೇವಮೂರ್ತಿ ಅವರ ಕೃತಿ. ಈ ಕೃತಿಯಲ್ಲಿ ಸುತ್ತನಿಪಾತದಿಂದ ಆಯ್ದ ಅಸಂಖ್ಯ ಕತೆಗಳಿವೆ. ಮಿಲಿಂದ ಪ್ರಶ್ನೆಯ ನಾಗಸೇನನ ಸಂವಾದವಿದೆ. ಯೋಗಾಚಾರ ಮತದ ಆಲಯ ವಿಜ್ಞಾನದ ಪ್ರಾಯೋಗಿಕ ವಿವರಣೆಯಿದೆ. ಮಾಧ್ಯಮಿಕರ ಸರ್ವಶೂನ್ಯವಾದದ ವಿಶ್ಲೇಷಮೆಯಿದೆ. ಜೆನ್ ಎಂಬ ಬೆಡಗಿನ ಪಂಥದ ಕುರಿತು ವ್ಯಾಪಕವಾದ ಜಿಜ್ಞಾಸೆಯಿದೆ. ಬೌದ್ಧ ವಿವೇಕದ ಹಿನ್ನೆಲೆಯಲ್ಲಿ ಚರ್ಯಾವಾದೆ. ಅಸ್ತಿತ್ವವಾದ, ಆಧುನಿಕ ಮನೋವಿಜ್ಞಾನ ಮೊದಲಾದ ಜ್ಞಾನಪ್ರಸ್ಥಾನಗಳ ಅವಲೋಕವಲಿದೆ. ಬೌದ್ಧಧರ್ಮದ ಹಿರಿಮೆಯೊಂದಿಗೆ ಅದರ ಕುಂದು ಕೊರತೆಗಳನ್ನೂ ತುಂಬಾ ಕಾಳಜಿಯಿಂದ ಇದರಲ್ಲಿ ಗುರುತಿಸಲಾಗಿದೆ. ಅಧ್ಯಾತ್ಮವನ್ನು ಒಂದು ಲಾಭದಾಯಕ ದಂಧೆಯಾಗಿಸಿಕೊಂಡಿರುವ ಎಲ್ಲ ಆಧುನಿಕತೆಯ ವಿಕಾರಗಳಿಂದ ಪಾರಾಗಲು ಸೂಕ್ತ ಮಾರ್ಗದರ್ಶನ ಇದರಲ್ಲದೆ ಮತ್ತು ಬೋದಿಧರ್ಮ, ಸರಹಪಾದ, ಸ್ಥೂಲವಾಗಿ ವಿಂಗಡಿಸಿ ಹೇಳುವುದಾದರೆ, ಇಷ್ಟು ಕಾಲದವರೆಗೆ ಬುದ್ಧನನ್ನು ಪಾಶ್ಚಿಮಾತ್ಯ ಅಧ್ಯಯನ ಮಾದರಿಗಳು ಮತ್ತು ಸಾಂಪ್ರದಾಯಿಕ ಶಾಸ್ತ್ರಗ್ರಂಥಗಳು ಪರಿಚಯಿಸುತ್ತ ಬಂದಿದ್ದವು. ಇದಾದರೂ ಆ ಎರಡೂ ಮಾದರಿಗಳಿಗಿಂತ ಭಿನ್ನವಾದ ಸಂಕಥನವಾಗಿದೆ. ಇದು ಅಲೌಕಿಕ ಅರಿವಿನ ಸ್ಪಂದನದಿಂದ ಅಂತರಂಗವನ್ನು ಬೆಳಗಿಸಿಕೊಂಡ ಆತ್ಮಜ್ಞಾನಿಯೊಬ್ಬನ ಬೆಳಕಿನ ನುಡಿಗಳಲ್ಲಿ ಬುದ್ಧನನ್ನು ಹೊಸದಾಗಿ ಕಾಣಿಸುವ ಪ್ರಯತ್ನಲಾಗಿದೆ. ಜಗತ್ತಿನಲ್ಲಿ ಆದಿಶಂಕರನಿಂದ ಹಿಡಿದು ನಮ್ಮ ಕಾಲದ ಯುಜಿ ತನಕ ಅವತರಿಸಿರುವ ಪ್ರತಿಯೊಬ್ಬ ಅನುಭಾವಿಯ ನುಡಿಗಳಲ್ಲೂ ಬುದ್ಧನ ವಿವೇಕವೇ ಪ್ರತೀತವಾಗುವುದಾದರೂ ಇಂದಿನತನಕ ಯಾವ ಆತ್ಮಾನುಭವಿಯೂ ಬುದ್ಧ ಮತ್ತು ಅವನ ಪರಂಪರೆಯನ್ನು ಕುರಿತು ಇಷ್ಟೊಂದು ವ್ಯಾಪಕವಾಗಿ ವಿವರಿಸಿರಲಿಲ್ಲ. ಆದಕಾರಣ ಈ ಕೃತಿಯು ಬೌದ್ಧ ವಾಗ್ಮಯದಲ್ಲೇ ಅತ್ಯಂತ ಹೊಸ ಬಗೆಯ ಸಂಕಲನವಾಗಿದೆ.
ಟಿ.ಎನ್.ವಾಸುದೇವ ಮೂರ್ತಿ ಅವರು ಕಿ.ರಂ.ನಾಗರಾಜ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಅಲ್ಲಮ ಪ್ರಭುವಿನ ವಚನಗಳ ದಾರ್ಶನಿಕ ಮರುಚಿಂತನೆಯ ವಿಭಿನ್ನ ಸ್ವರೂಪಗಳು ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನದ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರಶಸ್ತಿ ಸಂದಿದೆ. ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ (ತೌಲನಿಕ ಸಾಹಿತ್ಯ) ಪದವಿಯನ್ನು ಪಡೆದ ಮೇಲೆ ಬೆಂಗಳೂರಿನ ಹಲವು ಪ್ರಮುಖ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ನ್ಯಾಷನಲ್ ಕಾಲೇಜು, ಜೈನ್ ವಿಶ್ವವಿದ್ಯಾಲಯ ಕಾವ್ಯಮಂಡಲ ಮೊದಲಾದ ಕನ್ನಡ ಸ್ನಾತಕೋತ್ತರ ಕೇಂದ್ರಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಎಂ.ಎ. ಹಾಗೂ ಎಂ.ಫಿಲ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಓಶೋ ನೇರ ಶಿಷ್ಯರಾದ ಸ್ವಾಮಿ ಆನಂದ್ ಪ್ರಭಾವದಿಂದ ದೀಕ್ಷೆ ...
READ MORE