ಭಾರತೀಯ ಕವಿಗಳಲ್ಲಿ ಶ್ರೇಷ್ಟನಾದ ವಿದ್ಯಾಪತಿ ಕವಿಯ ’ಪುರುಷ ಪರೀಕ್ಷೆ’ ಸುಮಾರು 1412-16 ರಲ್ಲಿ, ರಚಿತವಾದದ್ದು. ಒಟ್ಟು 44 ಕತೆಗಳ ಸಂಕಲನ. ಇದನ್ನು ವಿಮರ್ಶಕ, ಅನುವಾದಕರಾದ ಡಿ. ಎ ಶಂಕರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಧೈರ್ಯ, ಸತ್ಯಪ್ರಿಯತೆ, ಋಜುತ್ವ, ಅಕಳಂಕ ಪ್ರೇಮ, ಮುಂತಾದವುಗಳ ಕತೆಯ ಜೊತೆಜೊತೆಗೇ ಇದನ್ನು ಪ್ರಶ್ನಿಸುವ, ತಮಾಷೆ ಮಾಡುವ ಕತೆಗಳೂ ಇವೆ.
ಇಲ್ಲಿನ ಅನೇಕ ಪಾತ್ರಗಳು ನೇರವಾಗಿ ವಿದ್ಯಾಪತಿಯ ಕಾಲದ ಚಾರಿತ್ರಿಕ ಸಂದರ್ಭದಿಂದಲೇ ಬಂದದ್ದಾಗಿದೆ. ಕಥಾ ಪರಂಪರೆಗಳಲ್ಲಿ- ಕಾವ್ಯ ಪರಂಪರೆಗಳಲ್ಲಿ ಯಾವುದು ವಿಸ್ತಾರವಾಗಿ, ಭಾವುಕವಾಗಿ, ತನ್ಮಯತೆಯಿಂದ ಶೋಧಿತವಾಗಿರುತ್ತದೋ ಅದರ ಚಿಕ್ಕ ಪ್ರತಿರೂಪವನ್ನು ವಿದ್ಯಾಪತಿ ಕವಿ ರಚಿಸಿದ್ದಾನೆ.
ಕೆಲವು ಕಥೆಗಳನ್ನು ಜಾಣತನದ ತಂತ್ರದ ಕಥೆಯನ್ನಾಗಿ ರೂಪಿಸುವ, ವ್ಯಂಗ್ಯಗಳಿಂದ ಇಡೀ ಕಥೆಯನ್ನು ಸೃಷ್ಟಿಸುತ್ತಾನೆ. ಅನೇಕ ಕಥೆಗಳಲ್ಲಿ ಇತಿಹಾಸದ ನಾಯಕರು ಕಾಣಿಸಿಕೊಳ್ಳುತ್ತಾರೆ. ಎಲ್ಲವನ್ನೂ ಒಡೆದು ಚಾತುರ್ಯದ ರಚನೆಗಳನ್ನಾಗಿ ವಿಂಗಡಿಸುವ ಕವಿ ವಿದ್ಯಾಪತಿಯು ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಕಾಣುವ ಅಂತರ್ ಪಠ್ಯೀಯತೆಗೆ ಒಂದು ನಿರ್ದಿಷ್ಟ ಮಾದರಿಯಂತೆ ’ಪುರುಷ ಪರೀಕ್ಷೆ’ ಯನ್ನು ರಚಿಸಿದ್ದಾನೆ.
ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದ ಡಿ.ಎ. ಶಂಕರ ಅವರು ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. ನಂತರ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದ ಅವರು ಮೈಸೂರು ವಿಶ್ವವಿದ್ಯಾನಿಲಯದ ಮೊದಲ ಎಮರಿಟಸ್ ಪ್ರೊಫೆಸರ್ ಆದವರು. ಕಾವ್ಯ, ಅನುವಾದ, ವಿಮರ್ಶೆ ಹಾಗೂ ನಾಟಕ ಹೀಗೆ ವಿವಿಧ ಪ್ರಕಾರಗಳಲ್ಲಿ ಶಂಕರ್ ಅವರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇಂಗ್ಲೆಂಡ್‌ನ ಫೀಲ್ಡ್ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಪಡೆದ ಅವರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿಯ ಫೆಲೋ ಆಗಿದ್ದರು. ಹಾಗೆಯೇ, ಕೆನಡಾದ ಬ್ರಿಟಿಷ್ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಫ್ಯಾಕಲ್ಟಿ ಫೆಲೋಶಿಪ್‌ನಲ್ಲಿ ಕಾರ್ಯನಿರ್ವಹಿಸಿದ್ದವರು. ಬೆಳಕಿನ ಮರ, ನಿಮ್ಮಲ್ಲೊಬ್ಬ, ಪವಾಡ ಅವರ ...
READ MORE