ಮೂಲ ಕವಿ.ಡಾ.ಸಿ.ಎನ್.ಚಸಂದ್ರಶೇಖರ್ ಅವರ ಕೃತಿಯನ್ನು ಅನುವಾದಕಿ ಕವಿಯಿತ್ರಿ ಪ್ರಭಾಶಾಸ್ತ್ರಿ ಅನುವಾದಿಸಿದ್ದು, ಸ್ವಾತಿಮುತ್ತು ಎಂದು ಹೆಸರಿಸಿದ್ದಾರೆ. ತೆಲುಗು ಭಾಷೆಯಿಂದ ಕನ್ನಡ ಅನುವಾದ ಮಾಡಿರುವ ಈ ಕೃತಿಯಲ್ಲಿ 14 ಕಥೆಗಳ ಕಾವ್ಯವಿದೆ. ಸ್ವಾತಿಮುತ್ತು ಒಂದೊಂದು ಕಥೆ ಒಂದೊಂದು ವಿಶಿಷ್ಟವಾದ ಪ್ರಾಕಾರವಾಗಿದೆ.ಸಮಾಜದ ವಿವಿಧ ಮುಖಗಳ ಅನಾವರಣೆ ಈ ಕಥೆಗಳಲ್ಲಿ ಕಾಣುಬರುತ್ತದೆ.ವಂಚನೆ,ಮನೋವಿಕಾರದ ಮನುಜರು ಧರಣಿಯಲ್ಲಿರುತ್ತಾರೆ,ನಾವು ಸ್ವಲ್ಪ ಹೆಚ್ಚೇರಿಕೆಯಿಂದ ಜೀವನ ಬಡಿಸ ಬೇಕೆಂದು ಗೋಚರವಾಗುತ್ತದೆ.ಓದುವ ಪಾಠಕರಲ್ಲಿ ಓದುತ್ತಾ ಓದುತ್ತಾ ಆಶಕ್ತಿ ಹೆಚ್ಚಾಗುತ್ತದೆ.ಎಲ್ಲರೂ ಓದಿ ಆನಂದಿಸಿ.ಒಂದೊಂದು ಭಾಷೆಯಲ್ಲಿ ಆಯಾಯ ಸಮಾಜಗಳ ರೀತಿ,ಸಂಸ್ಕೃತಿ ಇರುತ್ತದೆ.
ಪ್ರಭಾಶಾಸ್ತ್ರಿ ಜೋಶ್ಯುಲ ಅವರು ಹುಟ್ಟಿದ್ದು ಆಂಧ್ರಪ್ರದೇಶ "ಮಂಡಪಾಕ" ಎನ್ನುವ ಹಳ್ಳಿಯಲ್ಲಿ. ತಂದೆ ವೆಂಕಯ್ಯ ಅವರು ರೈತರು, ತಾಯಿ ಭಾಸ್ಕರಮ್ಮ ಕರ್ನಾಟಕ ಸಂಗೀತದ ಗಾಯಕಿ. 17 ವಯಸ್ಸಲ್ಲಿ ಡಾ.ಜೆ.ಸಿ.ವಿ.ಶಾಸ್ತ್ರಿಗಳ ಜೊತೆ ವಿವಾಹಿತರಾದರು.ಅವರು ಮೈಸೂರು ಯೂನಿವರ್ಸಿಟಿದಲ್ಲಿ ಭೂಗರ್ಭಶಾಸ್ತ್ರ ವಿಭಾಗದಲ್ಲಿ ಪ್ರೊಫ್ಸರ್ ಆಗಿದ್ದರು. ತೆಲುಗು, ಕನ್ನಡ ರಚಿಸುವ ಆಸಕ್ತಿ ಹೊಂದಿರುವ ಇವರು ಎಂ.ಎ.(ಚರಿತ್ರೆ),ಎಂ.ಎ.(ತೆಲುಗು) ಪದವಿ ಪಡೆದಿದ್ದಾರೆ. ಪ್ರಶಸ್ತಿಗಳು: ಆತ್ಮಶ್ರೀ ಕನ್ನಡ ಸಾಹಿತ್ಯ ಪ್ರತಿಷ್ಠಾನ(ರಿ)ಬೆಂಗಳೂರು ಅವರು " ಮಥರ್ ತೆರಿಸ್ಸಾ" ಸದ್ಭಾವನಾ ಪುರಷ್ಕಾರ ಕೊಟ್ಟು ಗೌರವಿಸಿದ್ದಾರೆ. ಹಾಸ್ಯಕವಿ ವತಂಸ,ಕವಿತಾಶ್ರೀ,ಕಲಾತ್ಮ, ಕವಿಚಂದ್ರ. ತೆಲುಗು ಅವಾರ್ಡ್ಸ್: ಮಾತೃ ಭಾಷೆಯಲ್ಲಿ 6 ಪುಸ್ತಗಳು ಮುದ್ರಿತವಾಗಿವೆ. ಡಾ.ಬಿ.ಆರ್.ಅಂಬೇಡ್ಕರ್ ಜಾತೀಯ ಲಿಟರರಿ ಅವಾರ್ಡ್,ಹೈದರಾಬಾದ್ ದಲ್ಲಿ ...
READ MORE