ಹಿಂದಿ ಕಥೆಗಾರರ ಇತ್ತೀಚಿನ 21 ಕಥೆಗಳನ್ನು ಆಯ್ದು ಇಲ್ಲಿ ಕೊಡಲಾಗಿದೆ. ಇದನ್ನು ಡಾ. ಮೈಥಿಲಿ. ಪಿ. ರಾವ್, ಡಾ ಶಾಂತಕುಮಾರಿ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಹೊಸಕಾಲದ ಪದ್ಧತಿಗಳು ಅವು ಒಳ್ಳೆಯವೇ ಇರಲಿ, ಕೆಟ್ಟವೇ ಇರಲಿ, ಹೇಗೆ ಬೇರೆ ಬೇರೆಯವರ ಮೇಲೆ ಬೇರೆಬೇರೆ ಪ್ರಭಾವವನ್ನು ಬೀರುತ್ತವೆ ಎಂಬುದನ್ನು ವಿವರಿಸುತ್ತದೆ. ಇಲ್ಲಿನ ಪ್ರೇಮಚಂದ್ರರ ಒಂದು ಕಥೆ ಮನೋವೃತ್ತಿ. ಪಾರ್ಕಿನಲ್ಲಿ ಬೆತ್ತಲೆ ಮಲಗಿರುವ ಯುವತಿಯೊಬ್ಬಳನ್ನು ನೋಡಿ ವಿವಿಧ ಜನರು ಅವಳ ಭಾವಿ ಮಾವ, ಭಾವೀ ಪತಿ ಅವರೂ ಸೇರಿದಂತೆ ಯುವಕರು, ಮುದುಕರು, ವೃದ್ಧ ಮಹಿಳೆ, ಯುವತಿ, ಎಲ್ಲರೂ ಹೇಗೆ ಬೇರೆ ಬೇರೆ ರೀತಿಯಲ್ಲಿ ಟೀಕೆ ಟಿಪ್ಪಣಿಗಳನ್ನು ಮಾಡಿಕೊಂಡು ತಮ್ಮ ತಮ್ಮ ನಾಲಗೆಯ ತೆವಲುಗಳನ್ನು ತೀರಿಸಿಕೊಳ್ಳುತ್ತಾರೆ ಎಂಬುದನ್ನು ಈ ಸಮಪುಟದಲ್ಲಿ ಕೊಟ್ಟಿರುವ ಕಥೆಗಳಲ್ಲಿ ಕಾಣಬಹುದು.