ಈ ಕೃತಿ ರವೀಂದ್ರ ಕಥಾಮಂಜರಿಯ ಮೂರನೆಯ ಸಂಪುಟವಾಗಿದೆ. ಒಂದು ನಾಟಕ ಹಾಗೂ 19 ಕಥೆಗಳನ್ನು ಈ ಸಂಪುಟವು ಒಳಗೊಂಡಿದೆ. ನಾವು ಮಾಡುವ ಪಾಪಗಳ ಅರಿವಿದ್ದೂ ಕೂಡ ಅವುಗಳನ್ನು ಮುಚ್ಚಿಟ್ಟು ಕೊಳ್ಳುವುದು ಡಾಂಭಿಕತನವಾದರೆ, ಅದನ್ನು ಬೇರೆಯವರಿಗೆ ಹೇಳಿ ಹೃದಯವನ್ನು ಹಗುರ ಮಾಡಿಕೊಳ್ಳುವುದು ಒಂದು ಸರಳ ವಿಧಾನವೆನಿಸುತ್ತದೆ. ಆದರೆ ಇಲ್ಲಿನ ಹೀನ ಕೃತ್ಯವೆಂದರೆ ಮಾನವೀಯತೆಯನ್ನು ಬೋಧಿಸುತ್ತಾ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು. ಇದು ಸಂಸ್ಕಾರದಲ್ಲಿ ಬಿಂಬಿತವಾಗಿದೆ. ಹೂತಿಟ್ಟ ಹಣದ ಆಸೆಯಿಂದ ಪಡುವ ಪರಿಪಾಟಲು, ಏಕಾಕಿತನ, ಇವುಗಳಿಂದಾಗಿ ಆ ಧನದ ಬಗೆಗೆ ನಿರಾಸಕ್ತಿಯನ್ನು ತಳೆದು ಸರಳಬದುಕನ್ನೇ ಆಯ್ದುಕೊಳ್ಳುವ ಮೃತ್ಯುಂಜಯ ಇಂತಹ ಕಥೆಗಳು ನಮ್ಮ ಬಾಳಿಗೆ ಬೆಳಕು ನೀಡುವ ಹಣತೆಗಳಾಗಿವೆ. ಇಂತಹ ಪ್ರಮುಖ ಮಹತ್ವದ ಕಥೆಗಳು ಸಂಪುಟದಲ್ಲಿದೆ.
ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅಹೋಬಲ ಶಂಕರ ಅವರು ಅತ್ಯುತ್ತಮ ಅನುವಾದಕರು. ಕೊಲ್ಕತ್ತಾದಲ್ಲಿ ವಾಸಿಸುತ್ತಿದ್ದ ಅವರು ಬರಹಗಾರ, ಪತ್ರಿಕೋದ್ಯಮಿ ಹಾಗೂ ಮಹಾನ್ ಸಾರ್ವಜನಿಕ ಸೇವೆಯಲ್ಲಿ ಆಸಕ್ತರಾಗಿದ್ದರು. ಬಂಗಾಳಿಯ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ನೇರವಾಗಿ ಅನುವಾದಿಸಿದ ಹಿರಿಮೆ ಅವರದು. ...
READ MORE