ಗೇದ ಮೊಪಾಸಾ ಅವರ ಸಣ್ಣಕಥೆಗಳನ್ನು ಪಿ.ವಿ.ರಾಮಚಂದ್ರ ಕನ್ನಡಕ್ಕೆ ಅನುವಾದಿಸಿದ್ದಾರೆ. ಜಗತ್ತಿನ ಸಣ್ಣ ಕಥೆಗಾರರಲ್ಲಿ ಅಗ್ರಗಣ್ಯ ಕಥೆಗಾರ ಗೇದ ಮೊಪಾಸಾ. ಜಾಗತಿಕ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದಾತ. ಮೊಪಾನಾ ಕಥೆಗಳಲ್ಲಿ ಕೆಲವು ಕೇವಲ ಒಂದೆರಡು ಪುಟಗಳ ಅತೀ ಸಣ್ಣ ಕಥೆಗಳು, ಕೆಲವು ನೀಳ್ಗಥೆಗಳು, ಆದರ್ಶಗಳು ಮತ್ತು ಭಾವೋತ್ಕಟತೆಗಳ ಸೋಂಕಿಲ್ಲದೆ, ಮಧ್ಯಮ ವರ್ಗದ ರೈತಾಪಿ ಜನರ ಸಣ್ಣತನಗಳನ್ನು ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ಸಾಮರ್ಥ್ಯ ಶಕ್ತಿಗಳನ್ನು ತನ್ನ ಕಥೆಗಳಲ್ಲಿ ಬಿಚ್ಚಿಟ್ಟ ಸರಳ, ನೇರ ಭಾಷೆಯಲ್ಲಿ ವ್ಯಂಗ್ಯ ಮಿಶ್ರಿತ ಹಾಸ್ಯ ಶೈಲಿಯ ಅವನ ಕಥೆಗಳು ಬಹುಬೇಗ ಆಕರ್ಷಿಸುತ್ತವೆ. ಮೊದಲ ಬಾರಿಗೆ ಮನುಷ್ಯ ಮನಸ್ಸಿನಲ್ಲಿ ಅದರಲ್ಲೂ ಹೆಂಗಳೆಯರ ಸಂಕೀರ್ಣ ಮನಸ್ಸಿನಲ್ಲಿನ ಅದರಲ್ಲೂ ಹೆಂಗಳೆಯರ ಸಂಕೀರ್ಣ ಮನಸ್ಸಿನಲ್ಲಿನ ಭಾವಪ್ರಪಂಚವನ್ನು ಚಿಂತನಾಕ್ರಮಗಳನ್ನು ಮನೋವೈಜ್ಞಾನಿಕ ನೆಲೆಯಲ್ಲಿ ಬಿಚ್ಚಿಟ್ಟವರಲ್ಲಿ ಮೊಪಾಸಾ ಅಗ್ರಗಣ್ಯ. ಆತನ ಸಣ್ಣಕಥೆಗಳನ್ನು ಅಷ್ಟೇ ಕೌತುಕವಾಗಿ ಪಿ.ವಿ.ರಾಮಚಂದ್ರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.