ಗೋಕುಲದಾಸ ಪ್ರಭು ಅವರ ಕೊಂಕಣಿ ಭಾಷೆಯಲ್ಲಿ ಪ್ರಕಟವಾದ ಕೃತಿಯ ಕನ್ನಡ ಅನುವಾದ ‘ಅಂತರ ಆಯಾಮಿ’.
ಮೂಲತಃ ಕೊಚ್ಚಿಯವರಾದ ಗೋಕುಲದಾಸ ಪ್ರಭು, ಬ್ಯಾಂಕ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದವರು. ದಿನನಿತ್ಯ ವಿಧವಿಧದ ಜನರನ್ನು, ಅವರ ವರ್ಣರಂಜಿತ ಸ್ವಭಾವ, ಅವರ ಸಂತೋಷ, ದುಮ್ಮಾನಗಳು, ಅವರ ಆಕಾಂಕ್ಷೆಗಳು ಮತ್ತು ಅವರ ವೈಫಲ್ಯಗಳು ಈ ಎಲ್ಲವನ್ನೂ ಕಂಡ ಅನುಭವವನ್ನೇ ಕತೆಯನ್ನಾಗಿಸಿದ್ದಾರೆ.
ಇಲ್ಲಿಯ ಕಥೆಗಳು ಸಾಮಾನ್ಯವಾಗಿ, ಗೋವೆಯ ಕತೆಗಾರರ ಕತೆಗಳಲ್ಲಿ ಕಾಣಿಸಿಕೊಳ್ಳುವ ಮಧ್ಯಮವರ್ಗದ ಬದುಕಿನ ಅಭಿವ್ಯಕ್ತಿ ಹಾಗೂ ಪ್ರತಿಬಿಂಬವಾಗಿವೆ. ಗೀತಾ ಶೆಣೈ ಅವರು ಈ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'. ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...
READ MORE