‘ಮಲಯಾಳಂ ಕಥೆಗಳು’ ಕೆ.ಕೆ ಗಂಗಾಧರನ್ ಅವರ ಅನುವಾದಿತ ಕೃತಿಯಾಗಿದೆ. ಎಂ. ಟಿ ವಾಸುದೇವನ್ ನಾಯರ್ ಅವರ ಈ ಕೃತಿಯ ಮೂಲ ಕರ್ತೃ. ಕೃತಿಗೆ ಬೆನ್ನುಡಿ ಬರೆದಿರುವ ನಾ. ದಾಮೋದರ ಶೆಟ್ಟಿ ಅವರು, ಆರು ದಶಕಗಳ ಸುದೀರ್ಘ ಹಾಗೂ ಆಚೆಯ ಸಾಹಿತ್ಯ ಕೈಂಕರ್ಯದಲ್ಲಿ ಕಾದಂಬರಿ ಹಾಗೂ ಸಣ್ಣ ಕಥೆಗಳ ವರ್ತುಲವನ್ನು ಅಗಾಧಗೊಳಿಸಿ, ಮಲಯಾಳ ಸಾಹಿತ್ಯಕ್ಕೆ ಅಪರಿಮಿತ ಪ್ರಸಿದ್ದಿಯನ್ನು ತಂದುಕೊಟ್ಟವರು ಪದ್ಮಭೂಷಣ ಎಂ.ಟಿ.ವಾಸುದೇವನ್ ನಾಯರ್. ಮನೆಯ ಮಂಡಲದಿಂದ ಹಿಡಿದು ಭೂಮಂಡಲವನ್ನು ವ್ಯಾಪಿಸುವ ವಸ್ತುವಿಸ್ತಾರವನ್ನು ಅವರ ಕಥೆ ಕಾದಂಬರಿಗಳು ಒಳಗೊಂಡಿವೆ. ಒಂದು ತುಂಡು ನೀಲಿ ಕಾಗದ ಸಾಕು; ಸಂಸಾರದ ಉದ್ದಗಲದಲ್ಲಿ ಸಂಚಲನ ಉಂಟುಮಾಡುವುದಕ್ಕೆ. ಒಂದು ಹಳ್ಳಿಯ ಮನೆ ಸಾಕು; ಅಭೂತಪೂರ್ವ ಬದುಕನ್ನು ಕಟ್ಟಿಕೊಡುವುದಕ್ಕೆ. ಒಂದು ಗುಡ್ಡದ ಯಾತ್ರೆ ಸಾಕು; ಗತಕಾಲದ ನೆನಪುಗಳನ್ನು ಮೆಲುಕು ಹಾಕುವುದಕ್ಕೆ ಈ ಕೃತಿಯು ಸಹಕಾರಿಯಾಗುತ್ತದೆ.ಆಧುನಿಕ ಮಲಯಾಳ ಸಾಹಿತ್ಯದ ಸಣ್ಣಕತೆ, ನೀಳ್ಗತೆ ಹಾಗೂ ಕಾದಂಬರಿ ಪ್ರಕಾರಗಳಿಗೆ ರಾಷ್ಟ್ರಮಟ್ಟದಲ್ಲಿ ಗೌರವ ಸಲ್ಲುತ್ತಿದೆ. ಅಂಥ ಮಟ್ಟಕ್ಕೆ ಏರುವುದು ಸಾಧ್ಯವಾದುದು ಬಹು ಮುಖ್ಯವಾಗಿ ಎಂ.ಟಿ.ಅವರ ಕಥನ ಕೌಶಲ್ಯದಿಂದಲೆ. ಮಲಯಾಳದ ಕಸುವನ್ನು ಅದರ ಆಳದಿಂದ ಅರಿಯಬಲ್ಲ ಕೆ.ಕೆ. ಗಂಗಾಧರನ್, ಎಂ.ಟಿ. ವಾಸುದೇವನ್ ನಾಯರ್ ಅವರ ಕೆಲವು ಸಣ್ಣಕತೆ ಹಾಗೂ ನೀಳ್ಗತೆಗಳನ್ನು ಕನ್ನಡಕ್ಕೆ ತಂದುಕೊಟ್ಟು ಎರಡೂ ಭಾಷೆಗಳಿಗೆ ಗೌರವ ಸಲ್ಲಿಸಿದ್ದಾರೆ’ ಎಂದಿದ್ದಾರೆ.
©2024 Book Brahma Private Limited.