ಲೇಖಕರಾದ ವಾಸುದೇವರಾವ್ ಅವರು ಕನ್ನಡಕ್ಕೆ ತಂದಿರುವ ಕೃತಿ ’ಕಪ್ಪು ಮುತ್ತಿನ ರಹಸ್ಯ’. 1990 ರಲ್ಲಿ ಮೊದಲ ಮುದ್ರಣ ಕಂಡಿತ್ತು.
ಸ್ಕಾಟ್ ಲೆಂಡಿನ ಸರ್ ಅರ್ಥರ್ ಕಾನನ್ ಡಾಯ್ಲ್ ಪತ್ತೇದಾರಿ ಸಾಹಿತ್ಯ ಕ್ಷೇತ್ರದ ಬಹುದೊಡ್ಡ ಹೆಸರು. ಎ ಸ್ಟಡಿ ಇನ್ ಸ್ಕಾರ್ಲೆಟ್ ಕತೆಯ ನಾಯಕ ಷರ್ಲಾಕ್ ಹೋಮ್ಸ್ ಪಾತ್ರವು ಓದುಗರ ಮನಸ್ಸಿನಲ್ಲಿ ಜೀವಂತವಾಗಿ ಉಳಿದುಹೋಗಿದೆ. ವೈಜ್ಞಾನಿಕ ಹಿನ್ನೆಲೆಯೊಂದಿಗೆ ತರ್ಕ, ಬೌದ್ದಿಕ, ಚಾಕಚಕ್ಯತೆಗಳನ್ನು ದಂಗು ಬಡಿಸುವಂತೆ ನಿರೂಪಿಸುವ ಈತನ ಶೈಲಿ ಮೆಚ್ಚುವಂತದ್ದು.
ಈತನ ಪತ್ತೇದಾರಿಯ ಕೆಲವು ಕತೆಗಳನ್ನು ಕನ್ನಡಕ್ಕೆ ಕಪ್ಪು ಮುತ್ತಿನ ರಹಸ್ಯ, ಸೇಡಿನ ಪ್ರತಿಫಲ, ಬಯಲಾದ ಮೋಹದ ರಹಸ್ಯ, ವಿಚಿತ್ರ ಉಯಿಲು, ಬಿಳಿ ಕಲೆಯ ರಹಸ್ಯ, ಸುಂದರಿಯ ರಹಸ್ಯ, ವಿಚಿತ್ರ ಪ್ರಕರಣ ಎಂಬ ಶೀರ್ಷಿಕೆಯಡಿ ತರಲಾಗಿದೆ
ವಾಸುದೇವರಾವ್ ಕನ್ನಡದ ಪ್ರಸಿದ್ಧ ಲೇಖಕರು.ಅನೇಕ ಸ್ವತಂತ್ರ ಕೃತಿಗಳ ಜೊತೆಗೆ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಷರ್ಲಾಕ್ ಹೋಮ್ಸ್ ನ ಕೃತಿಗಳ ಅನುವಾದ ಮತ್ತು ಬ್ರಾಮ್ ಸ್ಪೋಕರ್ ಅವರ ಡ್ರಾಕುಲ ಇವರ ಪ್ರಮುಖ ಕೃತಿಗಳು. ವಾಸುದೇವರಾವ್ ಅವರು ಈಗ ನಮ್ಮೊಂದಿಗಿಲ್ಲ. ...
READ MORE