ಮಹಾಬಲ ಸೀತಾಳಭಾವಿ ಅವರು ರಷ್ಯಾ ಲೇಖಕ ಆಂಟನ್ ಚೆಕಾಫ್ ಅವರ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಚೆಕಾಫ್ ಅವರ ಕಥೆಗಳ ಹರವು ತುಂಬಾ ವಿಸ್ತಾರ. 19ನೇ ಶತಮಾನದ ರಷ್ಯಾದ ಸಾಮಾಜಿಕ, ರಾಜಕೀಯ ಸ್ಥಿತಿಗತಿಗಳನ್ನು ಬಿಂಬಿಸುವ ಕಥೆಗಳು ಇಲ್ಲಿವೆ. ಆ ಕಾಲದ ರಷ್ಯಾದ ಸಾಹಿತ್ಯಕ, ಸಂಸ್ಕೃತಿಯ ಸಂಪೂರ್ಣ ಚಿತ್ರಣ ನಮಗೆ ಸಿಗುತ್ತದೆ. ಅಲ್ಲಿಯ ವೋಡ್ಕಾ, ಅಲ್ಲಿಯ ಚಳಿ, ಹಿಮ ಸುರಿದ ಮನೆಯ ಛಾವಣಿಗಳು, ಮನೆಯ ಹಾಲ್ ಮಧ್ಯೆ ಉರಿಯುವ ಒಲೆ ಹೀಗೆ ಏನೆಲ್ಲವನ್ನು ಓದುಗರಿಗೆ ಕಟ್ಟಿಕೊಡುತ್ತದೆ. 12 ಕತೆಗಳಿವೆ.
©2024 Book Brahma Private Limited.