ಜಗತ್ತಿನ ಅತ್ಯುತ್ತಮ ಕತೆಗಳ ಕನ್ನಡಾನುವಾದ ಗಿಳಿಯು ಪಂಜರದೊಳಿಲ್ಲ. ಡಾ. ಟಿ.ಡಿ. ರಾಜಣ್ಣ ತಗ್ಗಿ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಗಿಳಿಯು ಪಂಜರದೊಳಿಲ್ಲ ಕೃತಿಯು ಭಾರತೀಯ ಭಾಷೆಗಳೂ ಸೇರಿದಂತೆ ಜಗತ್ತಿನ ಬೇರೆ ಬೇರೆ ಭಾಷೆಗಳ ಪ್ರಸಿದ್ಧ ಲೇಖಕರ ಅತ್ಯುತ್ತಮ ಸಣ್ಣಕತೆಗಳ ಸಂಕಲನ. ಇದರಲ್ಲಿ ಒಟ್ಟು ಹದಿನೆಂಟು ಕತೆಗಳಿದ್ದು ಎಲ್ಲವೂ ವಿಭಿನ್ನ ಕಥಾವಸ್ತುವನ್ನು ಒಳಗೊಂಡಿರುವಂಥವು. ಇಲ್ಲಿನ ಪ್ರತಿಯೊಂದು ಕತೆಯು ಮನುಷ್ಯನ ಜೀವನದ ಅನೇಕ ಬದುಕಿನ ಬೇರೆ ಬೇರೆ ಸಂಗತಿಗಳನ್ನು ಸೂಕ್ಷ್ಮವಾಗಿ ತಿಳಿಸಿಕೊಡುತ್ತಲೇ ಪ್ರತಿಯೊಬ್ಬ ಮನುಷ್ಯನನ್ನೂ ಪ್ರಭಾವಿಸಿ, ಅವರನ್ನು ಪರಾಮರ್ಶೆಗೆ ಹಚ್ಚುವ ಮತ್ತು ಆತ್ಮಾವಲೋಕನಕ್ಕೆ ಒಳಪಡಿಸುವ ಗುಣವನ್ನು ಹೊಂದಿವೆ.
ಕನ್ನಡದ ಯುವ ಸಂಶೋಧಕ, ಅನುವಾದಕ ಟಿ.ಡಿ. ರಾಜಣ್ಣ ತಗ್ಗಿ ಅವರು ಮೂಲತಃ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ತಗ್ಗಿಹಳ್ಳಿಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ, ಎಂ.ಫಿಲ್ ಮತ್ತು ಪಿಎಚ್.ಡಿ ಪದವಿಗಳನ್ನು ಪಡೆದಿರುವ ಅವರು ಮದರಾಸು ವಿಶ್ವವಿದ್ಯಾಲಯ ಹಾಗೂ ಜೈನ್ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮೌಲಿಕ ಪ್ರಬಂಧಗಳನ್ನು ಮಂಡಿಸಿರುವ ರಾಜಣ್ಣ ತಗ್ಗಿ ಅವರು ಮದರಾಸು , ಬೆಂಗಳೂರು ಮತ್ತು ಗುಲಬರ್ಗಾ ಆಕಾಶವಾಣಿ ಕೇಂದ್ರಗಳಲ್ಲಿಯೂ ಹಲವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಭಾಷೆ ಬಲ್ಲವರಾಗಿದ್ದು, ...
READ MORE