ಬದುಕಿನ ಬಗ್ಗೆ ಕೆಲವು ಕ್ಷಣಗಳಾದರೂ ನೋಡಿಕೊಳ್ಳುವಂತೆ ನಮ್ಮನ್ನು ಪ್ರೇರೇಪಿಸುವ ಬರವಣಿಗೆ ತಮಿಳಿನ ಅಶೋಕ್ ಮಿತ್ರನ್ ಅವರದ್ದು. ಸರಳವಾದ ಬರವಣಿಗೆ, ನಮ್ಮ ಅನುಭವಕ್ಕೇ ಕನ್ನಡಿ ಹಿಡಿಯುವಂತಹ ನಿರೂಪಣೆಯಾಗಿದೆ. ಈ ಸಂಪುಟವು ಒಟ್ಟು 30 ಕಥೆಗಳನ್ನು ಒಳಗೊಂಡಿದೆ. ಇದನ್ನು ಡಾ. ತಮಿಳ್ ಸೆಲ್ವಿಯವರು ಕನ್ನಡಕ್ಕೆ ಅನುಮಾದ ಮಾಡಿಕೊಟ್ಟಿದ್ದಾರೆ. ಕೆಲವು ಸಣ್ಣ ಸಣ್ಣ ಕೌಟುಂಬಿಕ ಪ್ರಸಂಗಗಳು, ನೆನಪಿನ ಬುತ್ತಿ, ಮನುಷ್ಯರ ನಡುವಿನ ಸೂಕ್ಷ್ಮ ಸಂಬಂಧ, ಕುಸಿಯುತ್ತಿರುವ ಮೌಲ್ಯಗಳನ್ನೇ ಅಶೋಕನ್ ಕಥೆಯಾಗಿ, ಮನೋಜ್ಞವಾಗಿ ವಿವರಿಸಿದ್ದಾರೆ.
ಭಾಷಾಂತರಗಾರ್ತಿ, ಭಾಷಾ ಸಂಶೋಧಕಿ ತಮಿಳ್ ಸೆಲ್ವಿಅವರು ಕನ್ನಡ ಪ್ರಾಧ್ಯಾಪಕರು. 1969 ಮಾರ್ಚ್ 13 ರಂದು ಜನಿಸಿದ ಅವರು ದ್ರಾವಿಡ ಮೂಲದ “ಕನ್ನಡ-ತಮಿಳು” ಎಂಬ ಸಂಶೋಧನಾ ಕೃತಿ ಹೊರತಂದಿದ್ಧಾರೆ. ತಮಿಳು ಕನ್ನಡ ಸಾಹಿತ್ಯದ ಸಂಬಂಧ (ತಮಿಳಿನಲ್ಲಿ-ಸಂಶೋಧನೆ), ಚೋಳ-ಪಲ್ಲವ-ಶಿಲ್ಪಕಲೆ, ಅಶೋಕ ಮಿತ್ರನ್ ಕಥೆಗಳು (ಭಾಷಾಂತರ), ಸಂಕ್ರಾಂತಿ (ಭಾಷಾಂತರ), ಅತ್ತಿಮಬ್ಬೆ (ಸಂಶೋಧನೆ), ಶ್ರೀಲಂಕಾದ ತಮಿಳು ಕವಿತೆಗಳು, 6, 7, 8 ಮತ್ತು 10ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕಗಳ ಸಂಪಾದನೆ, ನಾನು ಅವನಲ್ಲ ಅವಳು (ಅನುವಾದ). ಕರ್ನಾಟಕ ಲೇಖಕಿಯರ ಸಂಘದ ’ಎಚ್.ವಿ.ಸಾವಿತ್ರಮ್ಮ ದತ್ತಿನಿಧಿ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತ” ಲಭಿಸಿದೆ. ಕಾಂತಾವರ ಕನ್ನಡಸಂಘವು ’ಕರ್ನಾಟಕ ...
READ MORE