ಹನ್ನೊಂದನೆಯ ಶತಮಾನದ ಸಂಸ್ಕೃತ ಜೈನ ಕಥೆಗಳ ಸಂಕಲನವನ್ನು ಕನ್ನಡದ ಖ್ಯಾತ ವಿಮರ್ಶಕ, ಕವಿ, ಹಾಗೂ ಅನುವಾದಕರಾದ ಪ್ರೊ. ಡಿ ಎ. ಶಂಕರರು ಕನ್ನಡಕ್ಕೆ ತಂದಿದ್ದಾರೆ.
ಪ್ರಾಚೀನ ಭಾರತೀಯ ಕಥಾಸಾಹಿತ್ಯದಲ್ಲಿ ಜೈನರು ಅತ್ಯಂತ ಆಕರ್ಷಕ ಕಥೆಗಾರರಾಗಿದ್ಧಾರೆ. ಇಲ್ಲಿರುವ ಅನೇಕ ಕಥೆಗಳ ಲಕ್ಷಣ ಎಂದರೆ, ಆಧ್ಯಾತ್ಮಿಕ ವಿಕಾಸದ ಅನಿಶ್ಚಿತ ಸ್ಥಿತಿಗಳ ಚಿತ್ರಣ. ಮನುಷ್ಯರ ಬಗೆಗೆ ಕಟುನಿಷ್ಠುರ ದೃಷ್ಟಿಕೋನ ಜೈನ ಕಥಾ ಸಂವೇದನೆಯ ಮುಖ್ಯ ಲಕ್ಷಣವಾಗಿದೆ.ಈ ’ಕಥಾಕೋಶ’ದಲ್ಲಿನ ’ಎರಡು ಗಿಳಿಗಳ ಕಥೆ’ ಜೈನಕಥಾ ಪ್ರತಿಭೆಯ ಪ್ರಾತಿನಿಧಿಕ ಕಥೆಯಾಗಿದೆ. ಓದಿದಷ್ಟೂ ಅರ್ಥವಿಸ್ತಾರವಾಗುತ್ತ ಹೋಗುವ ಜನ್ಮಾಂತರ ಕತೆಯಾಗಿವೆ.
ಇಲ್ಲಿರುವ ಕತೆಗಳಲ್ಲಿ ಮನುಷ್ಯರು ಬದಲಾಗುವುದು ತತ್ವಗಳಿಂದಲ್ಲ, ಬದಲಾಗಿ ದಿಗ್ಬ್ರಮೆ, ತಲ್ಲಣಗಳಿಂದ ಎನ್ನುವುದನ್ನು ಗಮನಿಸಬಹುದು. ಯಶೋಭದ್ರೆಯ ಕತೆ, ರಿಷಿದತ್ತಳ ಕತೆ, ಲಲಿತಾಂಗನ ಕತೆ, ಆರಾಮಶೋಭಾ ಮತ್ತು ಕೃತಜ್ಞ ಸರ್ಪದ ಕತೆ, ಅಮರದತ್ತ, ಮಿತ್ರಾನಂದರ ಕತೆ ಇನ್ನೂ ಅನೇಕ ಜೈನ ಕತೆಗಳನ್ನು ’ಕಥಾಕೋಶ’ ಒಳಗೊಂಡಿದೆ.
©2024 Book Brahma Private Limited.