ಅರೇಬಿಯನ್ ನೈಟ್ ಭಾಗ-1, ಇಂಗ್ಲಿಷ್ ಕಥಾ ಸಂಕಲನದ ಕನ್ನಡಾನುವಾದ. ಈ ಎಲ್ಲಾ ಕಥೆಗಳಲ್ಲಿ ಭ್ರಾಂತಿ ಮತ್ತು ಗಳಿಗೆಗೊಂದು ರೀತಿಯ ಮತಿ ಭ್ರಮಣೆಯಿಂದ ಕೂಡಿದಂತಹ ಕಥಾ ವಸ್ತುಗಳನ್ನು ಉಳ್ಳವಂಥವುಗಳಾಗಿವೆ.
ಇಂಡಿಯಾ ದೇಶದ ರಾಜ ಶಹ್ರಿಯಾದ್ ತನ್ನ ಹೆಂಡತಿಯ ಅವಿಧೇಯತೆ ಮತ್ತು ಕಾಮ ಕ್ರೀಡೆಗಳ ಅವಾಂತರಗಳನ್ನು ಕಣ್ಣಾರೆ ನೋಡಿ ಕೋಪೋದ್ರೇಕನಾಗಿ ಅವಳ ಶಿರಚ್ಛೇದನವನ್ನು ಮಾಡಿಸುತ್ತಾನೆ. ಇದಾದ ನಂತರ ಎಲ್ಲಾ ಹೆಂಗಸರು ಇಷ್ಟೇ ಎಂದುಕೊಂಡು ಎಲ್ಲಾ ಸ್ತ್ರೀ ಜನಾಂಗದ ವಿರುದ್ಧ ಸೇಡನ್ನು ತೀರಿಸಿಕೊಳ್ಳಲು ತೀರ್ಮಾನಿಸುತ್ತಾನೆ. ಆ ಕಾರಣದಿಂದಾಗಿ ಪ್ರತಿ ರಾತ್ರಿ ಒಬ್ಬ ಸುರಸುಂದರಿಯಾದ ಹುಡುಗಿಯನ್ನು ಮದುವೆಯಾಗಿ ಅವಳನ್ನು ಅನುಭವಿಸಿ ಬೆಳಗಾದ ಕೂಡಲೇ ಅವಳ ಶಿರಚ್ಛೇದನ ಮಾಡಿಸುತ್ತಾನೆ.
ಕೊನೆಗೆ ಎಂಥಾ ಘಟ್ಟಕ್ಕೆ ತಲುಪಿದನೆಂದರೆ ನಾಡಿನಾದ್ಯಂತ ಅವನಿಗೆ ಸರಿ ಹೊಂದುವಂಥಾ ಹುಡುಗಿಯರೇ ದೊರೆಯದಂತಾಗುತ್ತಾರೆ. ಅವನ ಮಂತ್ರಿಯ ಮಗಳು ಶಹರ್‌ಜಾದ್‌ಳ ಹೊರತಾಗಿ ಮತ್ತಿನ್ಯಾರೂ ಅವನಿಗೆ ಸರಿಯಾಗಿ ಹೊಂದುವಂಥವರು ಇರಲೇ ಇಲ್ಲ. ಆಗ ಮಂತ್ರಿಗೆ ಬೇರೆ ದಾರಿ ಇಲ್ಲದೆ ತನ್ನ ಮಗಳನ್ನೇ ರಾಜನಿಗೆ ನೀಡುತ್ತಾನೆ. ಶಹರ್‌ಜಾದ್ ಅಪ್ರತಿಮ ಸುಂದರಿ, ಮಹಾ ಬುದ್ದಿವಂತೆ. ರಾಜನಿಗೆ ಮನ ತಣಿಸುವಂತಹ ಕತೆಗಳನ್ನು ಕೇಳುವುದರಲ್ಲಿ ಬಹಳ ಆಸಕ್ತಿ ಇದೆ ಎಂದು ತಿಳಿದುಕೊಳ್ಳುತ್ತಾಳೆ. ಆ ಕಾರಣದಿಂದಾಗಿ ಪ್ರತೀ ರಾತ್ರಿ ಅವನಿಗೆ ಒಂದೊಂದು ಕತೆಯನ್ನು, ಅದರ ಅಂತಿಮ ಭಾವೋದ್ರೇಕದ ಘಟ್ಟವನ್ನು ಮಾತ್ರ ಬೆಳಗಾಗುವ ತನಕ ಕಾದು ಹೇಳುತ್ತಿರುತ್ತಾಳೆ, ಕತೆಯ ಅಂತ್ಯವನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದ ರಾಜ ಅವಳ ಕೋಲೆಯನ್ನು ಹಾಗೇ ಮುಂದೂಡುತ್ತಾ ಹೋಗುತ್ತಾನೆ. ಹೀಗೆ ಆರಂಭಿಸಿದ ಕಥೆಗಳ ಸರಣಿ ಬರೋಬ್ಬರಿ 1001 ರಾತ್ರಿಗಳನ್ನು ಕ್ರಮಿಸಿದವು. ಈ ಕಾಲಾವಧಿಯಲ್ಲಿ ಶಹರ್‌ಜಾದ್ ಅವನಿಗೆ ಮೂರು ಜನ ಮಕ್ಕಳನ್ನು ಹೆತ್ತು ಕೊಡುತ್ತಾಳೆ.
ಇಂಡಿಯಾ, ಪರ್ಷಿಯಾ, ಮತ್ತು ಅರೇಬಿಯಾದಲ್ಲಿ ತನ್ನ ಮೂಲವನ್ನಿರಿಸಿಕೊಂಡ ಈ ಕತೆಗಳು ಪಂಚತಂತ್ರ ಮತ್ತು ಜಾತಕ ಕತೆಗಳ ಪರಂಪರೆಯಲ್ಲಿ ನಿರೂಪಿಸಲ್ಪಟ್ಟಿವೆ. ಸಾಹಸ ಮತ್ತು ನಿಗೂಢತೆಯನ್ನು ಕಾಪಾಡಿಕೊಂಡು ಮಂತ್ರ ಮುಗ್ಧ ಜಮಖಾನ್‌ಗಳ ಮೇಲಕ್ಕೆ ಜನಿ ಮತ್ತು ಜನ್ ಪರಿಸರಕ್ಕೆ ತಳ್ಳಿ ಬಿಡುತ್ತವೆ. ಇಲ್ಲಿ ಎಂದೆಂದೂ ಮರೆಯಲು ಸಾಧ್ಯವಿಲ್ಲದ 'ನಾವಿಕ ಸಿಂದಾ ಬಾದ್', “ಅಲ್ಲಾವುದ್ದೀನ್ ಮತ್ತು ಅವನ ಅದ್ಭುತ ದೀಪ', 'ಆಲಿಬಾಬ ಮತ್ತು ನಲವತ್ತು ಕಳ್ಳರು...' ಹೀಗೆ ಇನ್ನೂ ಸಾಕಷ್ಟು ಜನಪ್ರಿಯ ಕಥೆಗಳು ಈ ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ.
©2024 Book Brahma Private Limited.