ಪರಿಸರ ಬರಹಗಾರ, ಕಥೆಗಾರ ಕೆನೆತ್ ಅಂಡರ್ಸನ್‌ನ ಹಲವು ಕೃತಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಓದುಗರನ್ನು ಸೆಳೆಯುವ ಶಕ್ತಿಯಿರುವ ಇವರ ಕಥೆಗಳನ್ನು ಸಾಕ್ಷಿ ಅವರು ಕನ್ನಡೀಕರಿಸಿದ್ದಾರೆ. ಕೆನೆತ್ ಅವರ ಬೇಟೆಯ ಕತೆಗಳು ನಮ್ಮ ಪರಿಸರವನ್ನು ಸಮಗ್ರವಾಗಿ ಅರ್ಥೈಸಿಕೊಳ್ಳುವುದಕ್ಕೆ ಅನುವುಮಾಡಿಕೊಟ್ಟರೆ, ಸಾಕ್ಷಿ ಅವರ ಅನುವಾದ ಸರಳವಾಗಿ ಓದುಗನ ಮನಮುಟ್ಟುವಂತಿದೆ.
ಈ ಕೃತಿಯಲ್ಲಿ ನರಭಕ್ಷಕನ ಕಥೆ, ಮುದಿಯನೂರಿನ ದೈತ್ಯ ಚಿರತೆ, ತಲೈನೊವ್ವಿನ ನರದ್ವೇಷಿ, ಹುಚ್ಚು ಬಿರುಮಳೆ ಮಾಡಿದ್ದೇನು?, ಸಂಗಮದ ನರಭಕ್ಷಕ ಚಿರತೆ, ಶಿವನಪಲ್ಲಿಯ ಕಪ್ಪು ಚಿರತೆ, ಗೆರಹಟ್ಟಿಯ ವಿಚಿತ್ರ ನರಭಕ್ಷಕ, ಅಂಬ್ಲಿಗೋಳದ ದೊರೆ, ಪುಂಡು ಹುಲಿ ನರಭಕ್ಷಕನಾಗಿದ್ದು ಕಥೆಗಳಿವೆ. ಇದರೊಂದಿಗೆ ಡೋನಾಲ್ಡ್ ಅಂಡರ್ಸನ್ ಅವರೊಂದಿಗೆ ಸಂದರ್ಶನವೂ ಇದೆ.
©2024 Book Brahma Private Limited.