‘ಜಗವನೆ ಜಯಸೋಣ’ ಪ್ರಕಾಶ್ ಅಯ್ಯರ್ ಅವರ ಕೃತಿಯನ್ನು ಲೇಖಕ ಮಹಾಬಲೇಶ್ವರ ರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯಲ್ಲಿ ಸಣ್ಣ ಸಣ್ಣ ಕತೆಗಳು ಮತ್ತು ಆಖ್ಯಾನಗಳಿವೆ. ಆಕರ್ಷಕವಾದ ಹಾಗೂ ಉಪದೇಶಾತ್ಮಕವಲ್ಲದ ರೀತಿಯಲ್ಲಿ ಓರ್ವ ಯಶಸ್ವಿ ಮ್ಯಾನೇಜರ್ ಹಾಗೂ ನಾಯಕನಾಗುವುದು ಹೇಗೆ ಎಂಬುದನ್ನು ಈ ಪುಸ್ತಕ ಸ್ಫೂರ್ತಿದಾಯಕವಾಗಿ ಬಿಂಬಿಸುತ್ತದೆ.
ಆಡಳಿತ ನಿರ್ವಹಣೆಯ ಈ ಗುಚ್ಛಗಳು ನಿಸರ್ಗ, ಕ್ರೀಡೆಗಳು ಹಾಗೂ ಸಾಮಾನ್ಯ ಜೀವನದ ಘಟನೆಗಳಿಂದ ಹಲವಾರು ಮಹತ್ತ್ವದ ಪಾಠಗಳನ್ನು ಒದಗಿಸಿ, ಸುಲಭವಾಗಿ ಗ್ರಹಿಸಲು ಸಹಕಾರಿಯಾಗುತ್ತದೆ.
ಮಹಾಬಲೇಶ್ವರ ರಾವ್ ಅವರು 1952ರಲ್ಲಿ ಉಡುಪಿ ಜಿಲ್ಲೆಯ ಮಣೂರಿನಲ್ಲಿ ಜನಿಸಿದರು. ಎಂ.ಎ., ಎಂ.ಎಡ್ ಮತ್ತು ಪಿಎಚ್.ಡಿ. ಪದವೀಧರರಾದ ಅವರು ಆರು ವರ್ಷ ಪ್ರೌಢಶಾಲಾ ಕನ್ನಡ ಶಿಕ್ಷಕರಾಗಿ, ಮೂರು ವರ್ಷ ಆಕಾಶವಾಣಿಯ ಭದ್ರಾವತಿ ಹಾಗೂ ಮಂಗಳೂರು ಕೇಂದ್ರಗಳಲ್ಲಿ ಪ್ರಸಾರಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಹಾಬಲೇಶ್ವರ ರಾವ್ ಕಳೆದ ನಾಲ್ಕು ದಶಕಗಳಿಂದ ಕನ್ನಡ ಭಾಷಾ ಬೋಧನೆ, ಬರವಣಿಗೆ, ಭಾಷಣ, ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಲೇಖಕರಾಗಿ, ಅನುವಾದಕರಾಗಿ, ಅಂಕಣಕಾರರಾಗಿ ತಮ್ಮದೇ ಛಾಪು ಮೂಡಿಸಿರುವ ಅವರು 14ವರ್ಷ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ’ಉದಯವಾಣಿ’, ’ಪ್ರಜಾವಾಣಿ’, ’ತರಂಗ’, ’ಹೊಸತು’ ಮೊದಲಾದ ಕನಡ ದಿನಪತ್ರಿಕೆ, ಮ್ಯಾಗಸೈನ್‌ಗಳಲ್ಲಿ ಅವರ ನೂರಾರು ಲೇಖನಗಳನ್ನು ಪ್ರಕಟಣೆ ಕಂಡಿವೆ. ...
READ MORE