ಪ್ರಸಿದ್ಧ ಇಂಗ್ಲಿಷ್ ಲೇಖಕಿ ಜುಂಪಾ ಲಾಹಿರಿ ಅವರ ‘ಇಂಟರ್‌ಪ್ರೀಟರ್ ಆಫ್ ಮ್ಯಾಲಡೀಸ್’ ಕಥಾಸಂಕಲನದ ಕನ್ನಡ ಅನುವಾದವಿದು. ಭಾರತೀಯ ಮೂಲದ ಜುಂಪಾ ಲಾಹಿರಿ ಲಂಡನ್‍ನಲ್ಲಿ ಹುಟ್ಟಿ ಅಮೇರಿಕಾದ ರೋಡ್ ದ್ವೀಪದಲ್ಲಿ ಬೆಳೆದವರು. ಈಗ ನ್ಯೂಯರ್ಕ್ ನಗರದಲ್ಲಿ ವಾಸವಾಗಿದ್ದಾರೆ. ಅನಿವಾಸಿ ಭಾರತೀಯರಾಗಿರುವ ಇವರ ಹೆತ್ತವರು ಕಲ್ಕತ್ತಾದವರು. ಮಾತೃಭಾಷೆ ಬಂಗಾಲಿ. ತಮ್ಮ ಏಳನೆಯ ವಯಸ್ಸಿನಲ್ಲಿ ಬರೆವಣಿಗೆಯನ್ನು ಪ್ರಾರಂಭಿಸಿದ ಜುಂಪಾ ಲಾಹಿರಿಯ ಮೊದಲ ಕಥಾಸಂಕಲನ ‘ಇಂಟರ್‌ಪ್ರೀಟರ್ ಆಫ್ ಮ್ಯಾಲಡೀಸ್’.
ಇದು ಪ್ರಕಟವಾಗಿರುವುದು 1999ರಲ್ಲಿ. 2000ನೇ ಸಾಲಿನ ಪ್ರತಿಷ್ಟಿತ ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಈ ಸಂಕಲನದಲ್ಲಿ ಒಟ್ಟು 9 ಕಥೆಗಳಿವೆ. ಅನಿವಾಸಿ ಭಾರತೀಯರ ನೋವು, ಅನಾಥಪ್ರಜ್ಞೆ ಹಾಗೂ ಬದುಕಿನ ಗತಿಯನ್ನು ಸಾಹಿತ್ಯದಲ್ಲಿ ಮೂಡಿಸುತ್ತಿರುವ ಹೊಸದನಿ ಎಂದು ಗುರುತಿಸಿರುವ ಈ ಲೇಖಕಿಯ ‘ನಿಜ ಕಾವಲುಗಾರ’, ‘ಶ್ರೀಮತಿ ಸೇನರಲ್ಲಿ’, ‘ಬೀಬಿ ಹಲ್ದಾರಳ ಚಿಕಿತ್ಸೆ’ ಹಾಗೂ ‘ಮೂರನೆಯ ಮತ್ತು ಕೊನೆಯ ಖಂಡ’ ಕಥೆಗಳು ಸ್ತ್ರೀ ಕೇಂದ್ರಿತವಾಗಿ ಗಮನವನ್ನು ಸೆಳೆದಿವೆ. ‘ಬೇನೆಗಳ ದುಭಾಷಿ’ ‘ಒಂದು ಹಂಗಾಮಿ ವಿಚಾರ’, ‘ಮಿಸ್ಟರ್ ಪಿರ್‌ಜಾದ ಊಟಕ್ಕೆಂದು ಬಂದಾಗ’ ಕತೆಗಳು ಕೂಡ ಅಂತಾರಾಷ್ಟ್ರೀಯ ಮನ್ನಣೆ ಪಡೆದು ಬಹುಚರ್ಚಿತವಾಗಿವೆ.
©2024 Book Brahma Private Limited.