ಸಾಹಿತ್ಯಕ್ಕಾಗಿ ರಷ್ಯಾಕ್ಕೆ ಮೊಟ್ಟ ಮೊದಲ ನೊಬೆಲ್ ಪ್ರಶಸ್ತಿ ತಂದುಕೊಟ್ಟವನು ಬುನಿನ್. ಆತನ ಅಪರೂಪದ ಕಥೆಗಳನ್ನು ಇಲ್ಲಿ ಕನ್ನಡಕ್ಕೆ ತಂದಿದ್ದಾರೆ ಕಥೆಗಾರ ಎಸ್ ಗಂಗಾಧರಯ್ಯ.ತನ್ನ ವಿಶಿಷ್ಟವಾದ ಗ್ರಹಿಕೆ ಮತ್ತು ಗದ್ಯದ ನಾವೀನ್ಯತೆ ಕಾರಣದಿಂದ ಗಮನ ಸೆಳೆದಿರುವ ಬುನಿನ್ ಬರವಣಿಗೆ ಅಷ್ಟೇ ಆಪ್ತವಾದ ಬಗೆಯಲ್ಲಿ ಕನ್ನಡದಲ್ಲಿ ನಳನಳಿಸುವುದನ್ನು ಈ ಸಂಕಲನದ ಕಥೆಗಳಲ್ಲಿ ಕಾಣಬಹುದು. ಅನುವಾದಕ ಗಂಗಾಧರಯ್ಯ ಅವರೇ ಹೇಳುವಂತೆ, ಇಲ್ಲಿರುವುದು ಮಣ್ಣಿನ ಕಣ್ಣಿನ ನೋಟ. ಅದಮ್ಯ ತಾಯ್ತನದ ಹಂಬಲ. ಇಲ್ಲಿ ಪ್ರೀತಿಯ ಮಿಂಚುಗಳಿವೆ, ವಿರಹದ ಕಾರ್ಮೋಡಗಳಿವೆ, ತೋರಿಕೆಯ ಡೌಲುಗಳಿವೆ.
©2024 Book Brahma Private Limited.