ಈ ಸಂಪುಟವು ಕಥಾಸರಿತ್ಸಾಗರದ ಹನ್ನೊಂದನೆಯ ಲಂಬಕ ಮತ್ತು ಹನ್ನೆರಡನೆೆಯ ಲಂಬಕದ ಏಳು ತರಂಗಗಳನ್ನು ಉಭಯ ಲೇಖಕರು ಅನುವಾದ ಮಾಡಿ ಈ ಪುಸ್ತಕದಲ್ಲಿ ಕೊಟ್ಟಿದ್ದಾರೆ. ಅತ್ಯಂತ ಚಿಕ್ಕದಾಗಿರುವ ಹನ್ನೊಂದನೆಯ ಲಂಬಕವು ಡಾ. ಪಿ.ಎಸ್. ರಾಮಾನುಜಂ ಅವರು ಹೇಳುವಂತೆ ಬಹಳ ಸುಂದರವಾಗಿದೆ. ಹನ್ನೆರಡನೆಯ ಲಂಬಕವು ಲಲಿತಲೋಚನೆಯ ಪ್ರಸಂಗ, ಮೃಗಾಂಕದತ್ತ, ರಂಕುಮಾಲಿಯರ ಕಥೆಗಳನ್ನು ಈ ಕೃತಿಯು ಒಳಗೊಂಡಿದೆ. ಕಾಡು, ಸರೋವರ ಮೊದಲಾದವುಗಳ ವರ್ಣನೆ, ಸ್ತ್ರೀಯರ ಮನೋಭಾವದ ವರ್ಣನೆ ಚೇತೋಹಾರಿಯಾಗಿದೆ. ಈ ಎಲ್ಲಾ ಸಂಗತಿಗಳ ಕುರಿತ ಮಾಹಿತಿಯನ್ನು ಲೇಖಕರು ಸಂಪುಟದಲ್ಲಿ ಒದಗಿಸಿದ್ದಾರೆ.
ಲೇಖಕ, ಅನುವಾದಕ ಟಿ.ಎಸ್. ವೆಂಕಣ್ಣಯ್ಯನವರು (ಜನನ:01-10-1885) ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳೇಕೆರೆ ತಾಲ್ಲೂಕಿನ ತಳಕು ಗ್ರಾಮದಲ್ಲಿ. ಮೈಸೂರಿನಲ್ಲಿ ಕನ್ನಡ, ತೆಲುಗು ಸಾಹಿತ್ಯಾಧ್ಯಯನ ಮಾಡಿ, ಮದರಾಸು ವಿಶ್ವವಿದ್ಯಾಲಯದಿಂದ 1914ರಲ್ಲಿ ಎಂ.ಎ. ಪದವಿ ಪಡೆದರು. ಉದ್ಯೋಗಕ್ಕಾಗಿ ಸೇರಿದ್ದು ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ. ಬೆಂಗಳೂರು ಸೇಂಟ್ ಜೋಸೆಫ್ ಕಾಲೇಜು, ದೊಡ್ಡಬಳ್ಳಾಪುರ ಮುಂತಾದೆಡೆ ಶಿಕ್ಷಕ ವೃತ್ತಿ. ಬಹುಭಾಷಾ ವಿಶಾರದರು ಅವರು ಕನ್ನಡ, ತೆಲುಗು, ತಮಿಳು, ಸಂಸ್ಕೃತ, ಬಂಗಾಳಿ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ’ಶ್ರೀ ರಾಮಕೃಷ್ಣ ಲೀಲಾ ಪ್ರಸಂಗದ ಭಾಗ, ರವೀಂದ್ರರ ಪ್ರಬಂಧಗಳನ್ನಾಧರಿಸಿ ಬರೆದ ‘ಪ್ರಾಚೀನ ಸಾಹಿತ್ಯ’ ಅನುವಾದ ಕೃತಿಗಳು. ’ಹರಿಹರನ ...
READ MORE