ಜಾರ್ಜ್ ಅರ್ವೆಲ್ ನ ಮೃಗ ಪ್ರಭುತ್ವ ಗೂಡಾರ್ಥದ ಆಂಗ್ಲ ಕಾದಂಬರಿ. ಜಗತ್ತಿನಲ್ಲಿ ಅತಿ ಹೆಚ್ಚು ಓದುಗರನ್ನು ಈ ಕೃತಿ ಆಕರ್ಷಿಸಿದೆ ಎಂಬ ಸುದ್ದಿ ಇದೆ. 1917ರ ರಶಿಷಯನ್ ಕ್ರಾಂತಿಯ ಪರಿಣಾಮಗಳ ಪ್ರತಿರೂಪ, ತದನಂತರ ಸ್ಟಾಲಿನ್ ಆಡಳಿತದ ವೈಖರಿಗೆ ರೂಪಕವಾಗಿ ರೂಪುಗೊಂಡ ಈ ಕೃತಿ 1923 ರಿಂದ 2005ರ ನಡುವಿನ ಅತ್ಯುತ್ತಮ ಆಂಗ್ಲ ಕಾದಂಬರಿ ಎಂಬ ಹೆಗ್ಗಳಿಕೆಯೊತ್ತಿದೆ. ಈ ಕೃತಿಯಲ್ಲಿ ಬರುವ ಪ್ರದಾನ ಪಾತ್ರಧಾರಿಗಳಾದ ಪ್ರಾಣಿಗಳು ಅವರ ಯಜಮಾನ ಮಿ.ಜೋನ್ಸ್ ನೆಂಬ ಅದಕ್ಷ, ಕುಡುಕ ರೈತನನ್ನು ಒಂದು ದಿನ ಫಾರಂನಿಂದ ಹೊರದಬ್ಬಿ ತಾವೇ ಕೈವಶ ಮಾಡಿಕೊಳ್ಳುವ ಬಗೆ ವಿವರಿಸುತ್ತಾನೆ.
©2024 Book Brahma Private Limited.