ಕೇಂದ್ರ ಸಾಹಿತ್ಯ ಅಕಾದೆಮಿಯ ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲಿಕೆಯಲ್ಲಿ ರಂಗ ರಾವ್ ಅವರು ಇಂಗ್ಲಿಷಿನಲ್ಲಿ ಬರೆದಿರುವ “ಆರ್. ಕೆ. ನಾರಾಯಣ” ಜೀವನ-ಸಾಧನೆಯ ಕುರಿತಾದ ಗ್ರಂಥದ ಕನ್ನಡ ಅನುವಾದವಿದು. ಭಾರತದ ಪ್ರಸಿದ್ಧ ಸಾಹಿತಿಯಾಗಿರುವ ಆರ್. ಕೆ. ನಾರಾಯಣ ಅವರ ಬದುಕು, ಮಾಲ್ಗುಡಿಯ ಹಿನ್ನೆಲೆ ಮತ್ತು ಅವರ ಸೃಜನೇತರ, ಸಣ್ಣ ಕಥೆಗಳು, ಕಾದಂಬರಿಗಳು ಹಾಗೂ ಸಾಧನೆಯ ಕುರಿತಾಗಿ ವಿವರಗಳಿರುವ ಒಟ್ಟು 7 ಅಧ್ಯಾಯಗಳು ಈ ಗ್ರಂಥದಲ್ಲಿ ಇವೆ. ಈಗಾಗಲೇ ಕನ್ನಡಕ್ಕೆ ಅನುವಾದಗೊಂಡಿರುವ ನಾರಾಯಣ್ ಅವರ ಕತೆ, ಕಾದಂಬರಿಗಳ ಓದಿಗೆ ಈ ಕೃತಿ ಸೂಕ್ತ ಹಿನ್ನೆಲೆಯನ್ನು ನೀಡಬಲ್ಲದು. ಇಲ್ಲಿ ಅವರ ಬದುಕಿನ ಪ್ರಮುಖ ಘಟ್ಟಗಳು ಮತ್ತು ಗ್ರಂಥ ವಿವರಗಳನ್ನು ಕೂಡ ನೀಡಿರುವುದು ಸೂಕ್ತವಾಗಿದೆ.
ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'. ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...
READ MORE