ವಿವಿಧ ಪಾಶ್ಚಿಮಾತ್ಯ ಲೇಖಕರ ಕತೆಗಳನ್ನು ಸೊಗಸಾಗಿ ಕನ್ನಡಕ್ಕೆ ಭಾವಾಂತರಿಸಿದ್ದಾರೆ ಲೇಖಕ ಎ.ಎನ್. ಮೂರ್ತಿರಾವ್. ಇಲ್ಲಿ ಬರುವ ಪಾತ್ರಗಳ ಹೆಸರು ಇಂಗ್ಲಿಷ್ ಎನ್ನುವುದು ಬಿಟ್ಟರೆ ಕನ್ನಡದ ಕತೆಯಷ್ಟೇ ಆಪ್ತವೆನಿಸುತ್ತವೆ. ವಾಷಿಂಗ್ಟನ್ ಅರ್ವಿಂಗ್, ಚಾರ್ಲ್ಸ್ ಡಿಕನ್ಸ್ ಮುಂತಾದವರ ಏಳು ಕತೆಗಳನ್ನು ಈ ಕೃತಿ ಒಳಗೊಂಡಿದೆ.
ಲಲಿತ ಪ್ರಬಂಧ ಪ್ರಕಾರಕ್ಕೆ ವಿಶೇಷ ಕೊಡುಗೆ ನೀಡಿದ್ದ ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿರಾವ್ ವಿಮರ್ಶಕರೂ ಆಗಿದ್ದರು. ವೈಚಾರಿಕ ಗ್ರಂಥ ‘ದೇವರು’ ಮೂಲಕ ಜನಪ್ರಿಯರಾದ ಮೂರ್ತಿರಾವ್ ಅವರು 1900ರ ಜೂನ್ 18ರಂದು ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳಿನಲ್ಲಿ ಜನಿಸಿದರು. ತಂದೆ ಎಂ.ಸುಬ್ಬರಾವ್ ಮತ್ತು ತಾಯಿ ಪುಟ್ಟಮ್ಮ. ಬಾಲ್ಯದ ದಿನಗಳನ್ನು ಮೇಲುಕೋಟೆ, ನಾಗಮಂಗಲಗಳಲ್ಲಿ ಕಳೆದ ಮೇಲೆ 1913ರಲ್ಲಿ ಮೈಸೂರಲ್ಲಿ ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ಶಾಲಾ ಶಿಕ್ಷಣ ಮುಗಿಸಿ ಮೈಸೂರು ಮಹಾರಾಜ ಕಾಲೇಜನ್ನು ಸೇರಿದರು. ಬಿ.ಎ. ಪದವಿ (1922), ಎಂ.ಎ. ಪದವಿ (1924) ಪಡೆದರು. ಮಹಾರಾಜ ಕಾಲೇಜಿನಲ್ಲಿ ಟ್ಯೂಟರ್ (1924), ಮೈಸೂರು ವಿಶ್ವವಿದ್ಯಾಲಯದಲ್ಲಿ ...
READ MORE