‘ಸೇಡಿನ ಸಂಚು’ ಆರ್ಥರ್ ಕಾನನ್ ಡಾಯ್ಲ್ ಅವರ ಪತ್ತೇದಾರಿ ಕಥೆಗಳ ಕನ್ನಡಾನುವಾದ. ಈ ಕೃತಿಯನ್ನು ಲೇಖಕ ವಾಸುದೇವರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಸ್ಕಾಟ್ಲೆಂಡಿನ ಎಡಿನ್‌ಬರೋದಲ್ಲಿ 22ನೇ ಮೇ 1859ರಂದು ಹುಟ್ಟಿದ ಸರ್ ಆರ್ಥರ್ ಕಾನನ್ ಡಾಯ್ಲ್ ಪತ್ತೇದಾರಿ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. 1880ರ ದಶಕದ ಕೊನೆಯ ಭಾಗದಲ್ಲಿ ಬರವಣಿಗೆ ಆರಂಭಿಸಿದ ಆರ್ಥರ್ ಕಾನನ್ ಡಾಯ್ಲ್ ಕಾದಂಬರಿ ಮತ್ತು ಕಥಾ ಪ್ರಪಂಚದಲ್ಲಿ ಪ್ರಸಿದ್ಧನಾದ ಅತ್ಯುನ್ನತ ಪತ್ತೇದಾರ ಪರ್ಲಾಕ್ ಹೋಮ್ರನ್ನು ಹುಟ್ಟು ಹಾಕಿದ ಲೇಖಕ. 1887ರಲ್ಲಿ ಪ್ರಥಮವಾಗಿ 'ಎ ಸ್ಟಡಿ ಇನ್ ಸ್ಕಾರ್ಲೆಟ್' ಎಂಬ ಪರ್ಲಾಕ್ ಹೋಮ್‌ನ ಕಾದಂಬರಿ ಸೃಷ್ಟಿಸಿದ ಕಾನನ್ ಡಾಯ್ಲ್ 1890ರ ದಶಕದಲ್ಲಿ ಹಲವಾರು ಸಣ್ಣಕಥೆಗಳನ್ನು ಬರೆದರು.
ಕಥಾನಾಯಕ ಪರ್ಲಾಕ್ ಹೋಮ್ ಮತ್ತು ಅವರ ಸಹಾಯಕ ಡಾ. ವಾಟ್ಟನ್ ಮನೆ ಮಾತಾದರು. ಆರ್ಥರ್ ಕಾನನ್ ಡಾಯ್ಲ್ ಕಥೆಗಳ ಮುಖ್ಯ ಆಕರ್ಷಣೆ ಮೋಡಿ ಮಾಡುವ ಕಥಾನಕ ಮತ್ತು ಉತ್ತಮ ವ್ಯಕ್ತಿತ್ವ ಹೊಂದಿದ್ದ ಪರ್ಲಾಕ್ ಹೋಮ್ನ ಪಾತ್ರಚಿತ್ರಣ. ಪರ್ಲಾಕ್ ಹೋಮ್ಸ್ನ ಹಮ್ಮು, ಸರ್ವಜ್ಞತೆ ಮತ್ತು ತೀವ್ರ ಮುಗ್ಧತೆಯ ಸ್ವಭಾವ, ಜೊತೆಗೆ ಅವನ ಅನುಕಂಪ ಗುಣ ಅವನನ್ನು ಬಹಳ ಪ್ರಭಾವಿ ಮತ್ತು ಪ್ರೀತಿಪಾತ್ರ ಕಥಾನಾಯಕನನ್ನಾಗಿಸಿತು. 7ನೇ ಜುಲೈ 1930ರಲ್ಲಿ ಇಂಗ್ಲೆಂಡಿನ ಕ್ರಾಸ್‌ಬರೋನಲ್ಲಿ ನಿಧನರಾದ ಸರ್ ಆರ್ಥರ್ ಕಾನನ್ ಡಾಯ್ ಸೃಷ್ಟಿಸಿದ ಪರ್ಲಾಕ್ ಹೋಮ್ಸ್ ಇಂದಿಗೂ ವಿಶ್ವಸಾಹಿತ್ಯದಲ್ಲಿ ಅಮರನಾಗಿದ್ದಾನೆ. ಅವರ ಪತ್ತೇದಾರಿ ಕಥೆಗಳ ಕನ್ನಡಾನುವಾದ ಕೃತಿ ಇದು.
ವಾಸುದೇವರಾವ್ ಕನ್ನಡದ ಪ್ರಸಿದ್ಧ ಲೇಖಕರು.ಅನೇಕ ಸ್ವತಂತ್ರ ಕೃತಿಗಳ ಜೊತೆಗೆ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಷರ್ಲಾಕ್ ಹೋಮ್ಸ್ ನ ಕೃತಿಗಳ ಅನುವಾದ ಮತ್ತು ಬ್ರಾಮ್ ಸ್ಪೋಕರ್ ಅವರ ಡ್ರಾಕುಲ ಇವರ ಪ್ರಮುಖ ಕೃತಿಗಳು. ವಾಸುದೇವರಾವ್ ಅವರು ಈಗ ನಮ್ಮೊಂದಿಗಿಲ್ಲ. ...
READ MORE