ಭಾರತ, ಜಪಾನ್, ಚೀನಾ, ರಷ್ಯಾ, ಇಂಗ್ಲೆಂಡ್, ನಾರ್ವೆ ಹಾಗೂ ಪಶ್ಚಿಮ ಆಫ್ರಿಕಾ ಮುಂತಾದ ದೇಶಗಳ ಹನ್ನೆರಡು ಜನಪದ ಕಥೆಗಳ ಸಾರವನ್ನು ಲೇಖಕ ಬೇದ್ರೆ ಎನ್. ಮಂಜುನಾಥ ಅವರು ಮಕ್ಕಳಿಗಾಗಿ ಸರಳವಾಗಿ ರೂಪಾಂತರಿಸಿದ್ದಾರೆ. ಕುತೂಹಲ ಕೆರಳಿಸುವ, ನೀತಿಬೋಧಕ ಕಥೆಗಳಿದ್ದು,ಮಕ್ಕಳ ಮನಸ್ಸಿಗೆ ಮುದ ನೀಡುತ್ತವೆ. ಪೌರ್ವಾತ್ಯ ಮತ್ತು ಪಾಶ್ಚಾತ್ಯ ದೇಶಗಳ ಮಕ್ಕಳ ಜನಪದ ಕಥೆಗಳಿರುವ ಈ ಸಂಗ್ರಹ ಕಥೆಗಳ ವಸ್ತುವಿನ ದೃಷ್ಟಿಯಿಂದ ಮಹತ್ವದ್ದಾಗಿವೆ.
ಲೇಖಕ, ಚಿಂತಕ, ಅಂಕಣಕಾರರಾದ ಬೇದ್ರೆ ಮಂಜುನಾಥ್ ಮೂಲತಃ ಶಿವಮೊಗ್ಗದವರು, 10-06-1967ರಲ್ಲಿ ಕಡುಬಡತನದ ಕುಟುಂಬದಲ್ಲಿ ಹುಟ್ಟಿದ ಮಂಜುನಾಥ್ ಸದಾ ಕ್ರಿಯಾಶೀಲ ವ್ಯಕ್ತಿ. ತಮ್ಮ ಸ್ವ-ಪರಿಶ್ರಮದಿಂದಲೇ ಬೆಳೆದಿರುವ ಅವರು ಈ ವರೆಗೂ 50ಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ರಚಿಸಿದ್ದಾರೆ. ಸದ್ಯ ಆಕಾಶವಾಣಿ ಮೈಸೂರು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಜುನಾಥ್ ಅವರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎ ಓದುವಾಗಲೇ ಇಂಗ್ಲೀಷ್ ಗ್ರಾಮರ್ ಬಗ್ಗೆ ಪುಸ್ತಕ ಪ್ರಕಟಿಸಿದ್ದರು. ಈ ಪುಸ್ತಕ 10 ಬಾರಿ ಮರು ಮುದ್ರಣಕಂಡು ದಾಖಲೆ ಸೃಷ್ಟಿಸಿತ್ತು. ಆನಂತರ ಕುವೆಂಪು ವಿವಿಯಲ್ಲಿ ಇತಿಹಾಸದಲ್ಲಿ ಪ್ರಥಮರಾಗಿ ಪದವಿ ಗಳಿಸಿದ್ದರು. ಇಂಗ್ಲೀಷಿನಲ್ಲಿ ಎಂ.ಎ.ಮಾಡಲು ಬಯಸಿದ್ದ ಅವರು ಮೈಸೂರಿಗೆ ತೆರಳಿದರು. ಎಂ.ಎ ...
READ MORE