ತೆಲುಗು ಲೇಖಕ ನಕ್ಷತ್ರಂ ವೇಣುಗೋಪಾಲ್ ಅವರ ಕತಾಸಂಕಲನವನ್ನು ಕನ್ನಡದ ಅನುವಾದಕಿ, ಲೇಖಕಿ ಎಂ.ಜಿ.ಶುಭಮಂಗಳ ಅವರು ಅನುವದಿಸಿದ್ದು, ಮೌನಸಾಕ್ಷಿ ಎಂದು ಹೆಸರಿಸಿದ್ದಾರೆ. ರೂಪದರ್ಶಿ ಜಿ.ವೆಂಕಟೇಶ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ ಶುಭಮಂಗಳ ಅವರು ಬಳಸುವ ಶಬ್ದ ಭಂಡಾರ, ಆಡುಭಾಷೆ, ನಿರೂಪಣಾ ಶೈಲಿಯಿಂದ ಅನುವಾದದ ಕತೆ ಎಂಬ ಕುರುಹೇ ಇಲ್ಲದ ಹಾಗೆ ಕತೆಗಳು ಸಾರ್ವತ್ರಿಕವಾಗಿ ತಟ್ಟುತ್ತವೆ. ಇಲ್ಲಿ ಬಳಸುವ ಭಾಷೆ, ಉಪಮೆಗಳು, ಕತೆಗಳ ಹೂರಣಕ್ಕೆ ಗಾಢತೆಯನ್ನು ನೀಡಿ ಅದರ ಪರಿಣಾಮವಾಗಿ ಹೆಚ್ಚಿಸುತ್ತವೆ. ಮುಖ್ಯವಾಗಿ ಎಲ್ಲಾ ಕತೆಗಳೂ ಮಾನವೀಯ ಮೌಲ್ಯಗಳಿಗೆ ಹಿಡಿದ ಕನ್ನಡಿಯಾಗಿದೆ ಎಂಬುದಾಗಿ ಹೇಳಿದ್ದಾರೆ.
ಕೃತಿಯ ಪರಿವಿಡಿಯಲ್ಲಿ ನಾತಿಚರಾಮಿ, ರೈಲ್ವೆ ಸತ್ಯಂ, ವಾತ್ಸಲ್ಯ, ಮೌನಸಾಕ್ಷಿ, ವೇಕ್ ಅಪ್, ಮೃಗಗಳ ನಡುವೆ, ಸೂಪರ್ ಹೀರೋ ಸೇರಿದಂತೆ 11 ಶೀರ್ಷಿಕೆಗಳ ಕತೆಗಳಿವೆ.
©2024 Book Brahma Private Limited.