ಐತಿಹಾಸಿಕ ವ್ಯಕ್ತಿ ಚಾಣಕ್ಯನು ಆಡಳಿತಾತ್ಮಕ ಹಾಗೂ ರಾಜನೀತಿಯಲ್ಲಿ ಪರಿಣಿತ. ಆತನ ಚಾಣಾಕ್ಷತನ ಕುರಿತ ಹಲವಾರು ಚಿಂತನೆಗಳು ಪ್ರಸಿದ್ಧಿ ಪಡೆದಿವೆ. ಖ್ಯಾತ ಲೇಖಕ ರಾಧಾಕೃಷ್ಣನ್ ಪಿಳ್ಳೆ ಅವರು ಇಂಗ್ಲಿಷಿನಲ್ಲಿ ಬರೆದ ಕೃತಿಯನ್ನು ಜೈಕೋ ಪಬ್ಲಿಷಿಂಗ್ ಹೌಸ್ ಸಂಸ್ಥೆಯು ಕನ್ನಡ ಓದುಗರ ದೃಷ್ಟಿಯಿಂದ, ವಿವಿಧ ಅನುವಾದಕರ ನೆರವಿನಿಂದ `ಕಥಾ ಚಾಣಕ್ಯ’ ಕೃತಿಯನ್ನು ಪ್ರಕಟಿಸಿದೆ. ಕನಸುಗಾರರಿಗೆ ಹಾಗೂ ಚಿಂತಕರಿಗೆ ವಿವೇಕದ ಕಥೆಗಳು ಎಂಬುದು ಕೃತಿಯ ಉಪಶೀರ್ಷಿಕೆಯಾಗಿದೆ. ಹೀಗಾಗಿ, ಬೇರೆ ಬೇರೆ ವಲಯದಲ್ಲಿ ಕಾರ್ಯ ನಿರ್ವಹಣೆಯ ಯಶಸ್ವಿಗಾಗಿ ಉತ್ತಮ ಮಾದರಿ-ಹೊಳವುಗಳನ್ನು ನೀಡುವ ಕಥೆಗಳನ್ನು ಈ ಕೃತಿ ಒಳಗೊಂಡಿದೆ.