ಲೇಖಕ ಡಿ.ಎನ್. ಶ್ರೀನಾಥ್ ಅವರು ಅನುವಾದ ಮಾಡಿರುವ ಹಾಸ್ಯ ಸಂಕಲನ ಕೃತಿ ʻಚರ್ಚಿತ ವ್ಯಂಗ್ಯ ಕಥೆಗಳುʼ. ಗ್ಯಾನ್ ಚತುರ್ವೇದಿ ಅವರು ಮೂಲ ಕೃತಿ ಲೇಖಕರು. ಇಲ್ಲಿರುವ ಹಾಸ್ಯ ಕತೆಗಳು ಪ್ರಸ್ತುತ ಸಂದರ್ಭ, ಸನ್ನಿವೇಶಗಳಿಗೆ ಹಿಡಿದ ಕನ್ನಡಿಯಂತಿವೆ. ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಅಂಶಗಳು ಹೀಗೆ ದಿನನಿತ್ಯದ ವ್ಯವಹಾರಗಳನ್ನು ಒಳಗೊಂಡಿವೆ.
ಅನುವಾದಕ ಶ್ರೀನಾಥ್ ಅವರು ಹುಟ್ಟಿದ್ದು 1950 ಡಿಸೆಂಬರ್ 3ರಂದು. ಮೂಲತಃ ಶಿವಮೊಗ್ಗದವರು. ತಂದೆ ಡಿ.ನಾರಾಯಣ ರಾವ್, ತಾಯಿ ಗುಂಡಮ್ಮ. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು, ಧಾರವಾಡದ ಮುಕ್ತ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ನಂತರ ಶಾರದಾದೇವಿ ಬಾಲಿಕಾ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ನಿವೃತ್ತರಾದರು. ಸಾಹಿತ್ಯದೆಡೆಗಿನ ಒಲವು ಅನುವಾದದತ್ತ ಲೇಖಕರನ್ನು ಸೆಳೆಯಿತು. 18ನೇ ವಯಸ್ಸಿನಲ್ಲಿಯೇ "ಶಿಶಿರ" ಕೃತಿಯನ್ನು ಅನುವಾದ ಮಾಡಿದರು. ಹಿಂದಿ ಮಾತ್ರವಲ್ಲದೇ ಬಂಗಾಳಿ ಭಾಷೆ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಪ್ರಮುಖ ಅನುವಾದಿತ ಕೃತಿಗಳೆಂದರೆ; ಸೂತ್ರದ ...
READ MORE