‘ರಷ್ಯಾ ದೇಶದ ಕಥೆಗಳು’ ಲೇಖಕ ಅನುವಾದಕ ಟಿ.ಎಸ್. ರಘುನಾಥ್ ಅವರು ಅನುವಾದಿಸಿರುವ ಕಥಾ ಸಂಕಲನ. ರಷ್ಯ ದೇಶದಲ್ಲಿ ಜಾನಪದೀಯ ಕಥೆಗಳು ಜನಜನಿತ. ಪಾರಂಪರಿಕ ಕಥೆಗಳು ಇವೆ. ರಷ್ಯಾದ ವಿವಿಧ ಭಾಗದ ಪ್ರಾದೇಶಿಕತೆಯನ್ನು ಒಳಗೊಂಡ ಕಥೆಗಳನ್ನೂ ಆಯ್ಕೆ ಮಾಡಿದ್ದು, ಇಲ್ಲಿಯ ಒಟ್ಟು ಕಥೆಗಳು ಆ ದೇಶದ ಸಂಸ್ಕೃತಿ, ಸಾಮಾಜಿಕ ಜನಜೀವನ, ಸಾಹಿತ್ಯಕವಾಗಿ ಬೆಳೆದು ಬಂದ ಕಥೆಗಳ ಬಗೆ... ಹೀಗೆ ವಿವಿಧ ನೆಲೆಯಲ್ಲಿ ಅಧ್ಯಯನ ಮಾಡಲು ಉತ್ತಮ ಕೃತಿ.
ಲೇಖಕ, ಅನುವಾದಕ ಟಿ.ಎಸ್. ರಘುನಾಥ್ ಅವರು ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ತಾಲೂಕಿನ ತುರುವನೂರಿನವರು. 1976ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು, ನಗರದ ವಿವಿಧ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. 1985ರಿಂದ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ಕಾಲೇಜು ಮಲ್ಲೇಶ್ವರದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಂತರ ಸ್ನಾತಕೋತ್ತರ ಸ್ಥಾಪಕ ಸಂಯೋಜಕರಾಗಿ ಕಾರ್ಯನಿರ್ವಹಿಸಿ 2014ರಲ್ಲಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಪರಂಪರೆ ಬಹು ಮುಖ್ಯವಾಗಿ ಕಥನ ಪರಂಪರೆ ಮತ್ತು ಸಂಶೋಧನಾ ಅಧ್ಯಯನಗಳಲ್ಲಿ ಆಸಕ್ತಿ ಹೊಂದಿರುವ ಅವರು ಪಾಶ್ಚಾತ್ಯ ಸಾಹಿತ್ಯ ಅದರಲ್ಲೂ ರಷ್ಯನ್ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ನಿವೃತ್ತಿಯ ನಂತರ ...
READ MORE