ಖ್ಯಾತ ಲೇಖಕ ಅಮೀಶ್ ಅವರ ಇಂಗ್ಲಿಷ್ ನಲ್ಲಿರುವ ಶಿವ ಸರಣಿ ಮಾಲೆಯಡಿಯ ಕೃತಿಯನ್ನು ‘ನಾಗಾ ರಹಸ್ಯ’ ಶೀರ್ಷಿಕೆಯಲ್ಲಿ ಲೇಖಕ ಎಸ್. ಉಮೇಶ್ ಅವರು ಕನ್ಡಡಕ್ಕೆ ಅನುವಾದಿಸಿದ್ದಾರೆ. ಪೌರಾಣಿಕ ಕಥೆಗಳನ್ನು ಜನಮಾನಸದಲ್ಲಿ ಪ್ರಚುರಪಡಿಸುವ ಮೂಲಕ ನೈತಿಕತೆಯನ್ನು ಹೆಚ್ಚಿಸುವುದು ಈ ಸರಣಿಯ ಮೂಲ ಉದ್ದೇಶ. ಧಾರ್ಮಿಕವಾಗಿ ನಾಗಗಳ ಮಹತ್ವ, ನಾಗ ಹಬ್ಬಗಳ ಆಚರಣೆಯ ಅಗತ್ಯವನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.
ಲೇಖಕ ಉಮೇಶ್ ಎಸ್. ಅವರು ಮೂಲತಃ ಮೈಸೂರಿನವರು. ಸಮಕಾಲೀನಕ್ಕೆ ಸ್ಪಂದಿಸುತ್ತಲೇ ಬರವಣಿಗೆಯನ್ನು ಮುಂದುವರಿಸುತ್ತಾರೆ. ಅಕ್ಕರೆ : ಎಚ್ಚೆಸ್ವಿ ಸಾಹಿತ್ಯಾಭಿನಂದನೆ, ತಾಷ್ಕೆಂಟ್ ಡೈರಿ’ ಅವರ ಇತ್ತಿಚಿನ ಪ್ರಕಟಿತ ಕೃತಿಗಳು. ...
READ MORE