‘ಹೆರೊಡೊಟಸನನ್ನು ’ ಜಾಗತಿಕ ಚರಿತ್ರೆಯ ಜನಕ’ ಎಂದು ಕರೆಯಲಾಗುತ್ತದೆ. ಅವರ The Histories Of Herodtus ಕೃತಿಯ ಕನ್ನಡಾನುವಾದ. ಡಾ.ಎಚ್.ವಿ. ರಂಗಾಚಾರ್ ಮಾಡಿದ್ದಾರೆ. ಪ್ರೊ. ಶಿವರಾಮಯ್ಯ ಸಂಗ್ರಹ ರೂಪದಲ್ಲಿ ಪ್ರಕಟಿಸಿದ್ದಾರೆ. ಹೆರೊಡೊಟಸ್ (ಕ್ರಿ.ಪೂ. ಸು. 484-420) ನ ಬಗ್ಗೆ ಹೆಚ್ಚು ಮಾಹಿತಿ ದೊರೆತಿಲ್ಲ. ಏಷ್ಯಾ ಮೈನರಿನ ಹರಿಕರ್ಣಾಸ್ ಎಂಬಲ್ಲಿ ತಂದೆ ಲಿಕ್ಸ, ತಾಯಿ ದ್ರಿಯೋ ದಂಪತಿಯ ಪುತ್ರನೀತ. ಕಾಲಲ್ಲಿ ಚಕ್ರ ಇದ್ದವನಂತೆ ಈತ ದೇಶ ಪರ್ಯಟನೆ ಮಾಡಿದವನು. ಪ್ರಾಚೀನ ಗ್ರೀಕ್ ನ ಕಲೆ ಸಾಹಿತ್ಯ, ಸಂಸ್ಕೃತಿಯ ಕೇಂದ್ರ ಅಥೆನ್ಸ್ ನಲ್ಲಿ ವಾಸವಿದ್ದನು. ಗ್ರೀಕರಿಗೂ, ಪರ್ಸಿಯನ್ ರಿಗೂ ಹೆಣ್ಣು-ಹೊನ್ನು-ಮಣ್ಣಿಗಾಗಿ ನಡೆದ ಮಹಾ ಯುದ್ಧದ ಕಥೆಗಳನ್ನು ಹಲವಾರು ಯುದ್ಧವೀರರ ಬಾಯಿಂದ ನೇರವಾಗಿ ಕೇಳಿದವನು. ಹಲವಾರು ಯುದ್ಧಗಳಲ್ಲಿ ತಾನೂ ಭಾಗವಹಿಸಿದ್ದ. ಗ್ರೀಸ್, ಪರ್ಸಿಯನ್ ಹಾಗೂ ಭೂಮಧ್ಯೆ ಸಾಗರ ದ್ವೀಪಾಂತರಗಳಲ್ಲಿ ಅಲೆದಾಡಿ ಅಲ್ಲಿ ತಾನು ಕಂಡು ಕೇಳಿದ ಜನರ ನಡೆ-ನುಡಿ, ಬಣ್ಣ- ಬೆಡಗು, ಶ್ರದ್ಧೆ, ಸಾಂಪ್ರದಾಯಗಳು, ದೈವಾರಾಧನೆಗಳು ಇತ್ಯಾದಿ ಈ ಅವನ ಸಮರ ಕಥೆಗಳು. ಕಣ್ಣಿಗೆ ಕಟ್ಟುತ್ತವೆ. ಇವನು ಜಾನಪದ ವಿಶ್ವಕೋಶ, ಏಕಕಾಲಕ್ಕೆ ಭೌಗೋಳಿಕ ಶಾಸ್ತ್ರಜ್ಞನು, ಜನಾಂಗೀಯ ಮಾನವ ಶಾಸ್ತ್ರಜ್ಞನು, ಸಾಂಸ್ಕೃತಿಕ ಸಂಶೋಧಕನು, ಕವಿ ಹೃದಯದ ಮನಃಶಾಸ್ತ್ರಜ್ಞನು ಆಗಿ ಜಗತ್ತಿನ ಚರಿತ್ರೆಕಾರರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾನೆ.
©2024 Book Brahma Private Limited.