ಜಿ.ಎ ಕುಲಕರ್ಣಿ ಅವರು ಮರಾಠಿ ಕಥಾ ಸಾಹಿತ್ಯದ ಪ್ರಮುಖ ಕತೆಗಾರರಲ್ಲಿ ಒಬ್ಬರು. ಇವರ ಇಪ್ಪತ್ಕಾಲ್ಕು ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ ಲೇಖಕ, ಮತ್ತು ಅನುವಾದಕ ಚಂದ್ರಕಾಂತ ಪೋಕಳೆ ಅವರು ಜಿ.ಎ ಅವರ ಐದು ರೂಪಕ ಕತೆಗಳನ್ನು ಬೇರೆ ಬೇರೆ ಕಥಾ ಸಂಗ್ರಹದಿಂದ ಆರಿಸಿ ಕನ್ನಡಕ್ಕೆ ’ಇಸ್ಕಿಲಾರ್’ ಕೃತಿಯನ್ನು ತಂದಿದ್ದಾರೆ.
ಈ ಸಂಗ್ರಹದಲ್ಲಿರುವ ಐದು ಕತೆಗಳು ಭಿನ್ನ ಮಾದರಿಯ ರೂಪಕ ಕತೆಗಳಾಗಿವೆ. ಪ್ರವಾಸಿ, ಇಸ್ಕಿಲಾರ್, ಆರ್ಫಿಯಸ್, ಯಾತ್ರಿಕ, ವಿದೂಷಕ ಕತೆಗಳನ್ನು ಈ ಕೃತಿ ಒಳಗೊಂಡಿದೆ.
ವಾಸ್ತವದಲ್ಲಿ ಸದಾ ಘಟಿಸುವ ಪ್ರಸಂಗವನ್ನು ಸರಳ ರೂಪದಲ್ಲಿ ಸ್ವೀಕರಿಸುವ ಬದಲು ಜಿ. ವಿ ಅವರ ಕತೆಯಲ್ಲಿಅವು ಬೇರೆ ರೂಪ ಪಡೆದುಕೊಳ್ಳುತ್ತವೆ. ಸಂಪೂರ್ಣ ಜೀವನವನ್ನೇ ಭಾಷೆಯನ್ಮೇ ರೂಪಕದ ಭಾಷೆಯಲ್ಲಿ ಮಂಡಿಸುವ ಕತೆಗಳಿವೆ.
©2024 Book Brahma Private Limited.