ಲೇಖಕ ಅಲೋಕ್ ಭಲ್ಲಾ ಅವರು 1993 ರಲ್ಲಿ ಸಂಕಲಿಸಿದ್ದ 46 ಕತೆಗಾರರ ಬೃಹತ್ ಸಂಪುಟವು ಆರ್.ಕೆ. ಹುಡಗಿ (ರಾಹು) ಅವರಿಂದ ಅನುವಾದಿತಗೊಂಡು ಕನ್ನಡದಲ್ಲಿ ಧರೆಹೊತ್ತಿ ಉರಿದಾಗ ಎಂಬ ಹೆಸರಿನ ಮೂರು ಭಾಗಗಳಲ್ಲಿ ಪ್ರಕಟಗೊಂಡಿದೆ.
ಪ್ರಪಂಚದ ವಿವಿಧ ಭಾಗಗಳಿಂದ ಜನ ಸಾಲು ಸಾಲುಗಟ್ಟಿ ಭಾರತಕ್ಕೆ ಬಂದರು. ಹಾಗೆ ಬಂದ ಎಲ್ಲರೂ ಇಲ್ಲಿಯೇ ತಮ್ಮ ಆವಾಸ ಕಂಡುಕೊಂಡು ನೆಲೆಯೂರಿ ನಿಂತರು. ತತ್ಪರಿಣಾಮವಾಗಿ ಆಗ ಭಾರತ ಜನ್ಮ ತಾಳಿತು ಎನ್ನುವ ಫಿರಾಖ್ ಗೋರಖ್ ಪುರಿ ಮಾತಿನ ಆಶಯದಂತೆ ಇಲ್ಲಿರುವ ಅನೇಕ ಬರಹಗಳ ಧೋರಣೆ, ಅಂಶಗಳು ಇದನ್ನೇ ಸಾರುವಂತದ್ದು.
ದಾವುಜೀ, ಆಶ್ರಯ, ನಮ್ಮ ದೇಶ, ಮೊಝಲ್, ನೈಜ ಪರಿಹಾರ, ಒಂದು ಹಳೆಯ ಕಥೆ, ಋಣ, ಏನೂ ಕಳೆದುಕೊಳ್ಳದವರು, ಸ್ಮಶಾನಕ್ಕೆ ಸಲ್ಲುವವರು, ನನ್ನ ಅವ್ವ, ದೇವರ ನಾಯಿ, 1947 ರ ಒಂದು ಕತೆ, ಬಿರುಗಾಳಿಯ ನಂತರ, ಮುಂತಾದ ಬರಹಗಳನ್ನು ಇಂತಿಜಾರ್ ಹುಸೇನ್, ನರೇಂದ್ರನಾಥ ಮಿತಾ, ಕಮಲೇಶ್ವರ, ನಾರಾಯಣ್ ಭಾರತಿ, ಅತ್ತಿಯಾ ಹುಸೇನ್, ರಮೇಶ್ ಚಂದ್ರಸೇನ್ ಮುಂತಾದವರ ಲೇಖನಗಳಿಂದ ಕನ್ನಡಕ್ಕೆ ಅನುವಾದಿಸಲಾಗಿದೆ.
©2024 Book Brahma Private Limited.