ಲೇಖಕ ಡಿ.ಎನ್. ಶ್ರೀನಾಥ್ ಅವರು ಸಂಪಾದಿಸಿದ ಹಾಗೂ ಅನುವಾದಿಸಿದ ಕಥಾಸಂಕಲನʻ ಒಂದಿಷ್ಟು ಭಾರತೀಯ ಕಥೆಗಳುʼ. ಇಲ್ಲಿ ಒಟ್ಟು 24 ಸಣ್ಣ ಕತೆಗಳ ಸಂಗ್ರಹವಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪ್ರಯಾಣಿಸುವ ಜನರ ಉತ್ಸಾಹ, ಜೀವನ, ಸಂಸ್ಕೃತಿ, ಪ್ರಯಾಣ ಹೀಗೆ ಎಲ್ಲಾ ವಿಷಯಗಳು ಇಲ್ಲಿನ ಕತೆಗಳ ವಸ್ತುಗಳಾಗಿವೆ. ಈ ಮೂಲಕ ಭಾರತದ ವಿಭಿನ್ನ ಶೈಲಿಯ ಪರಂಪರೆ, ಜೀವನದ ಪರಿಚಯವಾಗುತ್ತದೆ.
ಅನುವಾದಕ ಶ್ರೀನಾಥ್ ಅವರು ಹುಟ್ಟಿದ್ದು 1950 ಡಿಸೆಂಬರ್ 3ರಂದು. ಮೂಲತಃ ಶಿವಮೊಗ್ಗದವರು. ತಂದೆ ಡಿ.ನಾರಾಯಣ ರಾವ್, ತಾಯಿ ಗುಂಡಮ್ಮ. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು, ಧಾರವಾಡದ ಮುಕ್ತ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ನಂತರ ಶಾರದಾದೇವಿ ಬಾಲಿಕಾ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ನಿವೃತ್ತರಾದರು. ಸಾಹಿತ್ಯದೆಡೆಗಿನ ಒಲವು ಅನುವಾದದತ್ತ ಲೇಖಕರನ್ನು ಸೆಳೆಯಿತು. 18ನೇ ವಯಸ್ಸಿನಲ್ಲಿಯೇ "ಶಿಶಿರ" ಕೃತಿಯನ್ನು ಅನುವಾದ ಮಾಡಿದರು. ಹಿಂದಿ ಮಾತ್ರವಲ್ಲದೇ ಬಂಗಾಳಿ ಭಾಷೆ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಪ್ರಮುಖ ಅನುವಾದಿತ ಕೃತಿಗಳೆಂದರೆ; ಸೂತ್ರದ ...
READ MORE