ಲೇಖಕಿ ಕಮಲಾ ಹೆಮ್ಮಿಗೆ ಅವರ ಅನುವಾದಿತ ಸಣ್ಣಕಥೆಗಳ-’ಮಲೆಯಾಳದ ಪೆಣ್ ಕಥನ’. ಪ್ರಸಿದ್ಧ ಮಲೆಯಾಳಂ ಲೇಖಕಿಯರ ಪ್ರಸಿದ್ಧ ಕಥೆಗಳನ್ನು ಆಯ್ದು ಅನುವಾದಿಸಿದ್ದಾರೆ. ಎಲ್ಲ ತಲೆಮಾರಿನ, ಪ್ರದೇಶದ ಲೇಖಕಿಯರಿಗೆ ಪ್ರಾತಿನಿಧ್ಯವನ್ನು ಕೊಡಲಾಗಿದೆ. ಮಹಿಳೆಯರಿಂದ, ಮಹಿಳೆಯರು ಪ್ರೀತಿಸಬಲ್ಲ ಪೆಣ್ ಕಥನ ಇದಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ರಾಘವೇಂದ್ರ ಪಾಟೀಲ ಅವರು, ‘ಕೇರಳ ಕಾಂತೆಯರ ನೋವು, ಶೋಷಣೆಗಳ, ಬದುಕಿನ ಅನಾವರಣ. ಕನ್ನಡ ಲೇಖಕಿಯರಿಗೆ ಹೊಸ ಸಂವೇದನೆಗಳನ್ನು ಪರಿಚಯಿಸುತ್ತದೆ. ಕನ್ನಡದ ಮಹಿಳಾ ಸಾಹಿತಿಗಳು ಇಷ್ಟು ವ್ಯಾಪ್ತವಾಗಿ ನೈಸರ್ಗಿಕ ಕಾಮ. ಲೈಗಿಂಕತೆಯನ್ನು ಕೇಂದ್ರ ಸಮಸ್ಯೆಯಾಗಿಟ್ಟುಕೊಂಡು ತಮ್ಮ ಕಥೆಗಳಲ್ಲಿ ಚರ್ಚಿಸಿದಂತೆ ತೋರುವುದಿಲ್ಲ ಕನ್ನಡ ಮಹಿಳಾ ಕಥೆಗಾರರು ವಿಶೇಷವಾಗಿ ಚರ್ಚಿಸುವ ಸಂಗತಿಯು ಹೆಚ್ಚು ಪ್ರಮಾಣದಲ್ಲಿ, ಗಂಡು -ಹೆಣ್ಣಿನ ಸಂಬಂಧದಲ್ಲಿನ ಲೈಂಗಿಕೇತರ ಶೋಷಣೆಯಾಗಿರುವುದನ್ನು ಮತ್ತು ಗಂಡು – ಹೆಣ್ಣುಗಳು ಪರಸ್ಪರರನ್ನು ಆಯ್ದುಕೊಳ್ಳಲು ಇರುವ ಸಾಮಾಜಿಕ ಅಡೆತಡೆಗಳ ಜಾತಿ ವೈಷ್ಣಮ್ಯಗಳಂತಹ ಸಂಗತಿಗಳ ಕುರಿತಾಗಿರುವುದನ್ನು ಕಾಣುತ್ತೇವೆ. ಅಂದರೆ, ಕನ್ನಡದ ಮಹಿಳಾ ಕಥೆಗಳು ಮುಖ್ಯವಾಗಿ ಸಾಮಾಜಿಕ ಪರಿಪ್ರೇಕ್ಷದಲ್ಲಿ ಹೆಣ್ಣಿನ ಸಮಸ್ಯೆಯನ್ನು ನೋಡುತ್ತವೆ. ಬಹುಶಃ ಇದಕ್ಕೆ ಕಾರಣವೆಂದರೆ, ಕನ್ನಡ ಪರಿಸರದಲ್ಲಿನ ಜಾತಿ ಸಂರಚನೆಯ ತೀವ್ರತೆ ಕೇರಳದಲ್ಲಿ ಜನಸಮುದಾಯಗಳು ಬಹಳ ಬೇಗನೇ ಹೊರಗಿನವರ ಸಂಪರ್ಕಕ್ಕೆ ಬಂದು, ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಧಾರ್ಮಿಕ ಪಲ್ಲಟಗಳು ಸಂಭವಿಸಿದ್ದರಿಂದ ಜಾತಿಗಳ ನಡುವಿನ ಕಟ್ಟುತ್ವವು ಕಡಿಮೆಯಾಗಿರಬಹುದೇನೋ ಎಂದು ಅಭಿಪ್ರಾಯ ಪಟ್ಟಿದ್ದಾರೆ.
©2024 Book Brahma Private Limited.