`ಜಮೀಲಾ ಜಾವೇದ’ ಹಮೀದ ದಳವಾಯಿ ಅವರ ಮರಾಠಿ ಮೂಲದ ಕೃತಿಯಾಗಿದೆ. ಚಂದ್ರಕಾಂತ ಪೋಕಳೆ ಅವರು ಕ್ನನಡಕ್ಕೆ ಅನುವಾದಿಸಿದ್ದಾರೆ. ಇದು ಕಥಾ ಸಂಕಲನ. ಈ ಸಂಕಲನದಲ್ಲಿ ಒಟ್ಟು ಹನ್ನೊಂದು ಕತೆಗಳಿವೆ. ಕೇವಲ ನಾಸ್ಟಾಲ್ಜಿಯಾಕ್ಕೆ ಸಂತೃಪ್ತಿಕೊಡುವ ಮಟ್ಟಕ್ಕೆ ನಿಲ್ಲದೆ, ಮನುಷ್ಯನ ಮೌಲ್ಯಗಳ ಬಗ್ಗೆ, ಭಾವನೆ ಮತ್ತು ಸಂಸ್ಕಾರದ ಬಗ್ಗೆ ಮೌನವಾಗಿ ಮಿಡಿಯುವುದು ಈ ಕತೆಗಳ ಬಗ್ಗೆ ಗೌರವ ಹುಟ್ಟಿಸುತ್ತದೆ. ಅಂತಹ ಕತೆಗಳನ್ನು ನಾವು ಇಲ್ಲಿ ಕಾಣಬಹುದಾಗಿದೆ. ದಳವಾಯಿಯವರ ಕತೆಗಳು ತೀರ ಸರಳವಾದ ಭಾಷೆಯಲ್ಲಿ, ಸಹಜವಾಗಿ ಹೇಳುವ ವಿಧಾನದಲ್ಲಿ ಸಾಗುತ್ತವೆ. ಅಲ್ಲಿ ತೋರುಗಾಣಿಕೆಯ ಯಾವ ಭಂಗಿಯೂ ಇಲ್ಲ, ತಂತ್ರಗಾರಿಕೆ, ಮೆಚ್ಚಿಸಲು ಆಡುವ ಮಾತುಗಳೂ, ವಿಧಾನಗಳೂ ಇಲ್ಲ .ಸುಮಾರು ಐವತ್ತು ವರ್ಷಗಳಷ್ಟು ಹಿಂದಿನ ಭಾರತದ ಪರಿಸ್ಥಿತಿಯ ಒಂದು ಚಿತ್ರ ಒದಗಿಸುವ ಈ ಕತೆಗಳು ಸಮಾಜದ, ಆರ್ಥಿಕತೆಯ, ಹೆಣ್ಣಿನ ಸ್ಥಾನಮಾನದ, ಹಿಂದೂ ಮುಸ್ಲಿಂ ಬಾಂಧವ್ಯದ, ಧಾರ್ಮಿಕ ಮೌಲ್ಯ ಮತ್ತು ಮೌಢ್ಯದ, ಮೋಸ, ವಂಚನೆಯಂಥ ಮೌಲ್ಯಗಳಿಗೆ ಸಂಬಂಧಿಸಿದ ವಿವಿಧ ಚಿತ್ರಗಳನ್ನು ಕೊಡುತ್ತವೆ. ಬಾಲ್ಯದ, ಗಂಡು ಹೆಣ್ಣು ಸಂಬಂಧದ, ಹರಯದ ಪ್ರೇಮದ, ಮನುಷ್ಯ ಸಂಬಂಧಗಳ ಹಲವು ಕಥನಗಳು ಇಲ್ಲಿ ತೆರೆದುಕೊಂಡರೂ ದಳವಾಯಿಯವರ ಕತೆಗಳು ಒಟ್ಟಾರೆ ನೋಟವನ್ನು ಒದಗಿಸುವತ್ತ ಎಷ್ಟೊಂದು ಎಚ್ಚರಿಕೆಯಿಂದ ಗಮನಕೊಟ್ಟು ಬೆಳೆಯುತ್ತವೆ ಎಂದರೆ, ಯಾವುದೇ ಕತೆಯನ್ನು ಇಂಥ ವಸ್ತುವಿನ ಕತೆ ಎಂದು ಹೇಳುವುದೇ ಕಷ್ಟವೆನಿಸುವಷ್ಟು
©2024 Book Brahma Private Limited.