ಗುಹೆಯಲ್ಲಿ ಒಂದು ದಿನ

Author : ಧನಪಾಲ ನಾಗರಾಜಪ್ಪ

Pages 24

₹ 80.00




Year of Publication: 2020
Published by: ಧನಪಾಲ ನಾಗರಾಜಪ್ಪ
Address: ನೆಲವಾಗಿಲು (ಗ್ರಾಮ & ಅಂಚೆ), ನಂದಗುಡಿ (ಹೋಬಳಿ), ಹೊಸಕೋಟೆ , (ತಾಲ್ಲೂಕು), ಬೆಂಗಳೂರು ಗ್ರಾಮಾಂತರ ಜಿಲ್ಲೆ- 562122
Phone: 7892546523

Synopsys

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಸಲೀಂ ಅವರ "ಗುಹಲೋ ಒಕ ರೋಜು" ಎಂಬ ತೆಲುಗು ಸಚಿತ್ರ ಕತೆಯನ್ನು ಧನಪಾಲ ನಾಗರಾಜಪ್ಪಅವರು "ಗುಹೆಯಲ್ಲಿ ಒಂದು ದಿನ" ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿ, ಪ್ರಕಟಿಸಿದ್ದಾರೆ. ತೆಲುಗು ಭಾಷೆಯಲ್ಲಿ ಈ ಪುಸ್ತಕಕ್ಕೆ ತಾನಾ (TANA: TELUGU ASSOCIATION OF NORTH AMERICA) ಸಂಸ್ಥೆಯಿಂದ "ಉತ್ತಮ ಮಕ್ಕಳ ಪುಸ್ತಕ" ಪ್ರಶಸ್ತಿ ಸಿಕ್ಕಿದೆ. ನಾಡಿನ ಖ್ಯಾತ ವ್ಯಂಗ್ಯಚಿತ್ರಕಾರ ಗಂಗಾಧರ್ ಅಡ್ಡೇರಿ ಚೆಂದದ ಚಿತ್ರಗಳನ್ನು ಬರೆದುಕೊಟ್ಟಿದ್ದಾರೆ. ಇವರ ಚಿತ್ರಕಲೆ ಈ ಪುಸ್ತಕದ ಸೊಬಗನ್ನು ಇಮ್ಮಡಿಗೊಳಿಸಿದೆ. ಪುಟ್ಟ ಮಕ್ಕಳಿಗೆ ವಿಶೇಷವಾಗಿ 10 ವರ್ಷಗಳು ಮತ್ತು 10 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇದು ಬಹಳ ಇಷ್ಟವಾಗಬಹುದಾದ ಸಚಿತ್ರ ಕಥಾ ಪುಸ್ತಕವಿದು. ಮಕ್ಕಳಿಗೆ ಕತೆ ಹೇಳಿ ಮಲಗಿಸುವ ಪರಂಪರೆ ಬಹುತೇಕ ಇಲ್ಲವಾಗಿದೆ.  ನಿಂತುಹೋಗಿರುವ ಕತೆ ಹೇಳುವ ಪರಂಪರೆಯನ್ನು ಈ "ಗುಹೆಯಲ್ಲಿ ಒಂದು ದಿನ" ಕತೆಯ ಪುಸ್ತಕವನ್ನು ಓದಿ ಹೇಳುವ ಮೂಲಕ ಮರು ಚಾಲನೆಗೊಳಿಸಬಹುದು. ಈ ಕತೆಯಲ್ಲಿ ಸಾಹಸವಿದೆ, ಕುತೂಹಲವಿದೆ ಮತ್ತು ನೀತಿ ಇದೆ.

ಎಸ್. ಕಲಾಧರ್ ಅವರು ಈ ಪುಸ್ತಕವನ್ನು ವಿನ್ಯಾಸಗೊಳಿಸಿದ್ದು, ಇವರ ಪುತ್ರ ಎಸ್.ಕೆ. ನಿನಾದ ಅವರು ಸೊಗಸಾದ ರೇಖಾಚಿತ್ರಗಳನ್ನು ಚಿತ್ರಿಸಿದ್ದಾರೆ. ಖ್ಯಾತ ಗಜಲ್ ಲೇಖಕ ದೊಡ್ಡಕಲ್ಲಹಳ್ಳಿ ನಾರಾಯಣಪ್ಪ ಪುಸ್ತಕದ ಕುರಿತಾಗಿ "ಮಕ್ಕಳಲ್ಲಿ ಕುತೂಹಲ ಹೆಚ್ಚಿಸಿ ಓದಿಸಿಕೊಂಡು ಹೋಗುವ ಕಥೆ ಇದು.  ಮೊಬೈಲ್ ಹಾಗೂ ಕಂಪ್ಯೂಟರ್ ಗಳ ಮೋಹದಲ್ಲಿ ಮುಳುಗಿ ಮೌಲ್ಯಗಳನ್ನು ‌ಮರೆತು ದುರಂತ ಸಮಾಜವೊಂದರ ಸನಿಹದಲ್ಲಿ ಇರುವ ಇಂದಿನ ಮಕ್ಕಳನ್ನು ಇಂತಹ ಕಥಾಲೋಕದಲ್ಲಿ ವಿಹರಿಸುವಂತೆ ಮಾಡುವುದು ಬಹಳ ಮುಖ್ಯ. ಧನಪಾಲ ಅವರು ಇಂತಹ ಅತ್ಯುತ್ತಮ ಪ್ರಯತ್ನ ಮಾಡಿದ್ದಾರೆ. ನಾನೂ ಮಗುವಾಗಿ ಗುಹೆಗಳಲ್ಲಿ ಸುತ್ತಿ ಬಂದೆ. ನಾಡಿನ ಎಲ್ಲ ಮಕ್ಕಳಿಗೆ ಈ ಕಿರು ಹೊತ್ತಿಗೆ ಸಿಗುವಂತೆ ಮಾಡಬೇಕಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಧನಪಾಲ ನಾಗರಾಜಪ್ಪ
(20 June 1987)

ಧನಪಾಲ ನಾಗರಾಜಪ್ಪನವರು ಅನುವಾದಕರಾಗಿ ಚಿರಪರಿಚಿತರು. ನಾಗರಾಜಪ್ಪ ಹಾಗೂ ರಾಮಚಂದ್ರಮ್ಮ ದಂಪತಿಯ ಮಗನಾಗಿ 20-06-1987 ರಂದು ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ಪಟ್ಟಣದಲ್ಲಿ. ಜನಿಸಿದರು. ಭಾರತೀಯ ವಾಯು ಸೈನ್ಯದಲ್ಲಿ PBOR ಶ್ರೇಣಿಯಲ್ಲಿ ಕಳೆದ 15 ವರ್ಷಗಳಿಂದ ಏರ್ ಮೆನ್ ಆಗಿ ವೈದ್ಯಕೀಯ ಸಹಾಯಕನ ವೃತ್ತಿ. ಕಳೆದ 15 ವರ್ಷಗಳಿಂದ ಸಾಹಿತ್ಯಿಕ ಕೃಷಿಯಲ್ಲಿ ನಿರತನಾಗಿದ್ದು ಸ್ವ ರಚನೆ, ಸಂಪಾದನೆ, ಪ್ರಕಾಶನ ಮತ್ತು ಅನುವಾದದ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ನಿವೇದನೆ (ಕವನ ಸಂಕಲನ), ಮಿತ್ರವಾಣಿ (ಪ್ರಧಾನ ಸಂಪಾದಕತ್ವದ ಕವನ ಸಂಕಲನ), ಕಾಡುವ ಕಥೆಗಳು (ಅನುವಾದಿತ ಕಥಾ ಸಂಕಲನ, ತೆಲುಗು ಮೂಲ : ಸಲೀಂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು), ತಣ್ಣೀರ ...

READ MORE

Related Books