ಘನವು ಎಂಬುದು ಅನುವಾದಿತ ಕಥೆಗಳ ಸಂಕಲನವಾಗಿದೆ. ಇದರಲ್ಲಿ ರವೀಂದ್ರನಾಥ ಠಾಕೂರ್, ಸಾಮರ್ಸೆಟ್ ಮಾಮ್, ಟಾಲ್ ಸ್ಟಾಯ್, ಅಲ್ಬರ್ಟ್ ಕಾಮು, ಮಾರ್ಕ್ವೆಜ್ ಇನ್ನೂ ಮುಂತಾದ 35 ಜನರ ಕಥೆಗಳನ್ನು ಒಳಗೊಂಡಿರುವ ಈ ಸಂಕಲನದಲ್ಲಿನ ಕಥೆಗಳು ಸಮಾಜದ ಹಲವು ಮುಖಗಳನ್ನು ಪರಿಚಯಿಸುತ್ತದೆ. ಇಲ್ಲಿನ ಕಥೆಗಳಲ್ಲಿ ಜಮೀನ್ದಾರಿ ಪದ್ಧತಿಯ ಕರಾಳ ಮುಖದ ದರ್ಶನ, ಅನಕ್ಷರತೆಯಿಂದುಂಟಾಗುವ ಸಂಕಷ್ಟ, ಗಂಡು ಹೆಣ್ಣಿನ ಸಂಬಂಧ, ಪುರೋಹಿತಶಾಹಿ ವರ್ಗದ ಅಂಧ ಶ್ರದ್ಧೆ, ಮನುಷ್ಯ ಸಂಬಂಧ, ದಲಿತರ ನೋವು ನಲಿವು, ಒಬ್ಬ ವ್ಯಕ್ತಿಗೆ ಇರಬೇಕಾದ ನೈತಿಕ ಮತ್ತು ಸಾಮಾಜಿಕ ಬದ್ಧತೆಗಳು ಅಲ್ಲದೆ ಕಾರ್ಮಿಕರ ಸಂಕಷ್ಟಗಳು, ಕೆಳಸ್ತರದವರ ಹಸಿವಿನ ಹೋರಾಟಗಳು, ಸ್ವಾರ್ಥ, ರಾಜಕೀಯ, ಹೆಣ್ಣಿನ ಮೇಲಾಗುವ ದೌರ್ಜನ್ಯಗಳು, ಮತ್ತು ಆಕೆಯ ಹಕ್ಕಿನ ಬಗೆಗೆ ತಿಳುವಳಿಕೆ ಮೂಡಿಸುವ, ಕಲಾವಿದರ ದಾರುಣ ಸ್ಥಿತಿ ಇವೆಲ್ಲವುಗಳನ್ನು ಒಳಗೊಂಡಿರುವ ಇಲ್ಲಿನ ಕಥೆಗಳು ಪ್ರಸ್ತುತ ಸಮಾಜ, ರಾಜಕೀಯಕ್ಕೆ ಹಿಡಿದ ಕೈಗನ್ನಡಿಗಳಾಗಿವೆ.
©2024 Book Brahma Private Limited.