ಅಂಕಣಕ್ಕೆ ಅನುವಾದಿತ ಕತೆಗಳು

Author : ಗುರುರಾಜ ಕೊಡ್ಕಣಿ, ಯಲ್ಲಾಪುರ

₹ 100.00




Published by: ಸಾಧನಾ ಪ್ರಕಾಶನ
Address: 15/16, ಮಳಿಗೆ -2, ನೆಲಮಹಡಿ, ಡಾ. ರಾಜ್ ಮೂರ್ತಿ ಎದುರು, ಶ್ರೀ ಲಕ್ಷ್ಮಿ ನರಸಿಂಹ ದೇವಾಲಯ ಬಳಿ, ಬಳೆಪೇಟೆ, ಮುಖ್ಯರಸ್ತೆ, ಬೆಂಗಳೂರು-560053
Phone: 8022343317

Synopsys

ಲೇಖಕ ಗುರುರಾಜ ಕೊಡ್ಕಣಿ ಅವರ ಕಥಾ ಸಂಕಲನ ಕೃತಿ ʻಅಂಕಣಕ್ಕೆ ಅನುವಾದಿತ ಕತೆಗಳುʼ. ಕೆಲವು ಆಯ್ದ ಇಂಗ್ಲಿಷ್ ಸಣ್ಣ ಕಥೆಗಳನ್ನು ಲೇಖಕರು ಇಲ್ಲಿ ಕನ್ನಡಕ್ಕೆ ಅನುವಾದ ಮಾಡಿ ಅವುಗಳನ್ನು ಒಂದು ಪುಸ್ತಕದ ರೂಪದಲ್ಲಿ ಹೊರತಂದಿದ್ಧಾರೆ. ಇಲ್ಲಿ ಒಟ್ಟು ಹದಿನೇಳು ಕತೆಗಳಿವೆ. ಅವುಗಳಲ್ಲಿ ವಿಶ್ವಸಾಹಿತ್ಯದ ಹೆಸರಾಂತ ಕತೆಗಾರರಾದ ಆಂಟನ್ ಚೆಕೊವ್, ಗೇಬ್ರಿಯಲ್ ಗಾರ್ಸಿಯ ಮಾರ್ಕೆಸ್, ಹೆನ್ರಿ ಹೆಮ್ಮಿಂಗ್‌, ಓ. ಹೆನ್ರಿ, ಮೊಹ್ಸಿನ್‌ ಹಮೀದ್‌, ಲಿಯೋ ಟಾಲ್‌ಸ್ಟಾಯ್ ಕತೆಗಳೂ ಸೇರಿದಂತೆ ಭಾರತೀಯ ಬರಹಗಾರರಾದ ರಸ್ಕಿನ್ ಬಾಂಡ್‌ ಕತೆಗಳೂ ಸೇರಿವೆ. ಇನ್ನೂ ಕೆಲವು ಅಷ್ಟೇನೂ ಖ್ಯಾತಿ ಪಡೆಯದ ಆದರೆ, ಓದುಗರನ್ನು ಚಿಂತನೆಗೆ ಹಚ್ಚಬಲ್ಲ ಕೆಲವು ವಿದೇಶೀ ಕತೆಗಾರರು ರಚಿಸಿರುವ ಕತೆಗಳ ಅನುವಾದಗಳಿವೆ. ಹೀಗೆ ವಿಶ್ವಸಾಹಿತ್ಯವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ತರುವ ಕೆಲಸವನ್ನು ಇಲ್ಲಿ ಲೇಖಕರು ಮಾಡಿದ್ದಾರೆ.

About the Author

ಗುರುರಾಜ ಕೊಡ್ಕಣಿ, ಯಲ್ಲಾಪುರ

ಗುರುರಾಜ ಕೊಡ್ಕಣಿ ಚಿಂತಕರು. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕಾರವಾರದವರು. ಶತಕಂಪಿನೀ, ವಿಕ್ಷಿಪ್ತ, ಪ್ರತಿಜ್ಞೆ ಇವು ಅವರ ಕಾದಂಬರಿಗಳು. ...

READ MORE

Excerpt / E-Books

ಲೇಖಕ ಗುರುರಾಜ ಕೊಡ್ಕಣಿ ಅವರು ತಮ್ಮ ʻಅಂಕಣಕ್ಕೆ ಅನುವಾದಿತ ಕತೆಗಳುʼ ಪುಸ್ತಕದ ಬಗ್ಗೆ ಬರೆದ ಮಾತುಗಳು ಇಲ್ಲಿವೆ... ಈ ವಾರ ನಡೆದ ರಾಜಕೀಯ ವಿದ್ಯಮಾನವೋ, ಕ್ರೀಡಾ ಜಗದ ಸಂದರ್ಭಗಳೋ ಅಥವಾ ಸಾಹಿತ್ಯಲೋಕದ ಬೆಳವಣಿಗೆಗಳ ಕುರಿತು ತನ್ನದೇ ದೃಷ್ಟಿಕೋನವನ್ನು ಅಭಿವ್ಯಕ್ತಿಸುವುದು ಅಂಕಣಕಾರನ ಸಹಜ ಶೈಲಿ, ನಾನೂ ಸಹ ಆ ಧಾಟಿಗೆ ಹೊರತೇನೂ ಆಗಿರಲಿಲ್ಲ. ಆದರೆ ಇಲ್ಲೊಂದು ಸಮಸ್ಯೆಯಿತ್ತು. ಸಾಧಾರಣವಾಗಿ ವಾರದ ನಡುವೆ ಏನಾದರೂ ರಾಜಕೀಯ ವಿದ್ಯಮಾನಗಳು ನಡೆದೇ ಇರುತ್ತಿದ್ದವು. ಅದಿಲ್ಲವಾದರೆ ಕ್ರೀಡಾಲೋಕದಲ್ಲೊಂದು ಬೆಳವಣಿಗೆ, ಸಾಹಿತ್ಯಲೋಕದಲ್ಲೊಂದು ಹೊಸ ಪ್ರಕರಣ ಹೀಗೆ ಏನಾದರೊಂದು ವಿಷಯ ನನ್ನ ಅಂಕಣಕ್ಕೆ ವಸ್ತುವಾಗುತ್ತಿತ್ತು. ಆದರೆ ಅಪರೂಪಕ್ಕೊಮ್ಮೆ ವಾರವೆನ್ನುವ ಏಳು ದಿನಗಳ ಅವಧಿಯಲ್ಲಿ ಏನೆಂದರೆ ಏನೂ ಸಂಭವಿಸುತ್ತಿರಲಿಲ್ಲ. ಅಕ್ಷರಶಃ ಖಾಲಿ ಖಾಲಿ ಸ್ತಬ್ಧ ವಾರ ಆಗ ನನಗೆ ನಿಜಕ್ಕೂ ಗಲಿಬಿಲಿಯಾಗುತ್ತಿತ್ತು. ಏನು ಬರೆಯುವುದು ಎನ್ನುವುದೇ ಅರ್ಥವಾಗದ ಗೊಂದಲ, ಆ ಸಮಯಕ್ಕೆ ನನಗೆ ಆಧಾರವಾಗಿದ್ದು ಇಂಗ್ಲಿಷ್ ಸಣ್ಣ ಕಥೆಗಳು. ಮೇಲ್ನೋಟಕ್ಕೆ ತುಂಬಾ ಸುಲಭವೆನ್ನಿಸುವ, ಯಾರು ಬೇಕಾದರೂ ಮಾಡಿಬಿಡಬಹುದು ಎನ್ನುವ ಭ್ರಮೆ ಹುಟ್ಟಿಸುವ ಅನುವಾದವೆನ್ನುವ ಪ್ರಕ್ರಿಯೆ ಎಂಥ ಕ್ಲಿಷ್ಟಕರ ವಿಷಯ ಎನ್ನುವುದು ಅರ್ಥವಾಗಿದ್ದು ಆಗಲೇ, ಚಂದದ ಭಾವವಿರುವ ಅದೆಷ್ಟೋ ಸರಳಾತಿಸರಳ ಆಂಗ್ಲದ ಸಾಲುಗಳನ್ನು ನಾನು ಯಥಾವತ್ತಾಗಿ ಕನ್ನಡಕ್ಕೆ ತಂದಾಗ ಅವು ತೀರ ನೀರಸ, ಅರ್ಥವಿಲ್ಲದ ಸಾಲುಗಳಾಗಿ ಕಾಣುತಿದ್ದವು. ಮೊದಲ ಒಂದೆರಡು ಕತೆಗಳ ಅನುವಾದದ ಕಾಲಕ್ಕೆ ನಾನು ಹೆಣಗಾಡಿಹೋಗಿದ್ದೆ. ನಂತರದ ದಿನಗಳಲ್ಲಿ ಅನುವಾದದ ವ್ಯಾಕರಣ ನಿಧಾನಕ್ಕೆ ಅರಿವಾಗತೊಡಗಿತ್ತು. ಅನುವಾದದ ಭಾಷೆ ಅರ್ಥವಾದಂತೆಲ್ಲಾ ಅನುವಾದ ಸರಳವೆನ್ನಿಸತೊಡಗಿತ್ತು. ಈಗ ನನಗೆ ಅನುವಾದವೆಂದರೆ ಬಲು ಪ್ರಿಯ ಬರವಣಿಗೆಯ ಪ್ರಕಾರ. ಇಲ್ಲಿ ಒಟ್ಟು ಹದಿನೇಳು ಕತೆಗಳಿವೆ. ವಿಶ್ವಸಾಹಿತ್ಯದ ಸಾರ್ವಕಾಲಿಕ ಕತೆಗಾರರಾದ ಚೆಕಾಫ್, ಹೆಮ್ಮಿಂಗ್, ಓಹೆನ್ರಿಯ ಕತೆಗಳೂ ಸೇರಿದಂತೆ ಭಾರತೀಯ ಬರಹಗಾರರಾದ ರಸ್ಕಿನ್ ಬಾಂಡ್‌ ಕತೆಗಳೂ ಸೇರಿವೆ.ಕೆಲವು ಅಷ್ಟೇನೂ ಪ್ರಸಿದ್ಧರಲ್ಲದ ವಿದೇಶಿ ಕತೆಗಾರರ ಕತೆಯ ಅನುವಾದಗಳಿವೆ.

Related Books