ಸ. ರಘುನಾಥರ ಸಾಹಿತ್ಯ ಸಮಗ್ರ ಸಂಪುಟ-7ರ ಭಾಗವಾಗಿ ಲೇಖಕ ಸ. ರಘುನಾಥ ಅವರು ತೆಲುಗಿನ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ ಕೃತಿ-ವೆನ್ನೆಲ. ತಾವು ಬೆಳೆದ ಪರಿಸರ ಕನ್ನಡದ್ದಾಗಿದ್ದರೂ ತೆಲುಗು ಪ್ರಭಾವಿತವಾಗಿದ್ದರಿಂದ ಎರಡೂ ಭಾಷೆಯ ಮೇಲೆ ಸಿದ್ಧಿ ಸಾಧಿಸಿದ ಲೇಖಕರಿಗೆ ಭಾಷಾಂತರ ಕಲೆ ಕಷ್ಟವಾಗುವುದಿಲ್ಲ ಎಂಬುದಕ್ಕೆ ಈ ಕೃತಿ ಕನ್ನಡಿ ಹಿಡಿಯುತ್ತದೆ. ಕಥಾ ವಸ್ತು, ನಿರೂಪಣಾ ಶೈಲಿ, ಸಾಂಸ್ಕೃತಿಕ ಭಿನ್ನತೆಯ ಸ್ಪಷ್ಟತೆಯಿಂದ ಇಲ್ಲಿಯ ಭಾಷಾಂತರದ ಕಥೆಗಳು ಓದುಗರ ಗಮನ ಸೆಳೆಯುತ್ತವೆ.
ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...
READ MORE