ಇಲಿಯಡ್ ಹೋಮರನ 'ಒಡಿಸ್ಸಿ' ಮಹಾಕಾವ್ಯದ ಸಂಕ್ಷಿಪ್ತ ಸರಳಾನುವಾದವಾಗಿದೆ ಈ ಕೃತಿ. ಒಡಿಸ್ಯೂಸ್ ಎಂಬ ಗ್ರೀಕ್ ಮೂಲದ ಹೆಸರು ರೋಮನ್ ಭಾಷೆಯಲ್ಲಿ ಯೂಲಿಸಿಸ್ ಎಂದು ಬದಲಾಯಿತು. ಹೀಗಾಗಿ ಒಡಿಸ್ಯೂಸ್ ಗೆ ಬದಲಾಗಿ ಯೂಲಿಸಿಸ್ ಎಂಬ ಹೆಸರನ್ನೇ ಬಳಸಿಕೊಂಡಿರುವುದಾಗಿ ಲೇಖಕರೇ ಹೇಳಿದ್ದಾರೆ. ಇಲ್ಲಿ ಒಡಿಸ್ಯೂಸ್(ಯೂಲಿಸಿಸ್)ನ ಮರುಯಾನದ ಕಥೆಯಾಗಿದ್ದು, ಕಥಾನಾಯಕನ ಸಾಹಸಗಳು, ಗ್ರೀಕರ ಬಾಳು ಬದುಕು, ದೊರೆಗಳ ಗೃಹ ಜೀವನದ ವೈಭವ, ಅರಮನೆಯ ಸೇವಕರು, ಅನೈತಿಕ ಸಂಬಂಧದ ದಾಸಿಯರು, ಹೀಗೆ ಗ್ರೀಕರ ಜನಜೀವನವನ್ನು ಈ ಕೃತಿ ಚಿತ್ರಿಸುತ್ತದೆ.
©2024 Book Brahma Private Limited.