ಟ್ರಮಂಟಾನ ಮತ್ತು ಇತರೆ ಕಥೆಗಳು

Author : ರಘುನಾಥ ಟಿ.ಎಸ್.

Pages 192

₹ 220.00




Year of Publication: 2023
Published by: ವಂಶಿ ಪಬ್ಲಿಕೇಷನ್ಸ್
Address: #4, ಗಾಯತ್ರಿ ಕಾಂಪ್ಲೆಕ್ಸ್, ಟಿ.ಬಿ ಬಸ್ ಸ್ಟಾಪ್ ಹತ್ತಿರ, ಬಿ.ಎಚ್ ರೋಡ್, ಸುಭಾಸ್ ನಗರ, ನೆಲಮಂಗಲ ಬೆಂಗಳೂರು-562123
Phone: 9916595916

Synopsys

ಟ್ರಮಂಟಾನ ಮತ್ತು ಇತರೆ ಕಥೆಗಳು ರಘುನಾಥ ಟಿ.ಎಸ್‌ ಅವರ ಅನುವಾದಿತ ಕೃತಿಯಾಗಿದೆ. ಗೇಬ್ರಿಯಲ್ ಗಾರ್ಸಿಯ ಮಾರ್ಕೆಸ್, ಲ್ಯಾಟಿನ್ ಅಮೆರಿಕಾದ, ಸ್ಪ್ಯಾನಿಷ್ ಭಾಷೆಯ, ಇಪ್ಪತ್ತನೆಯ ಶತಮಾನದ ಅತ್ಯಂತ ಪ್ರಭಾವೀ ಲೇಖಕ. ಕೇವಲ ಯೂರೋಪ್ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ ದಂಥ ದೇಶಗಳ ಸಾಹಿತಿಗಳಷ್ಟೇ ಪ್ರಭಾವಶಾಲಿಗಳಾಗಿದ್ದ ಸಾಹಿತ್ಯಕ ಪ್ರಪಂಚದಲ್ಲಿ ಅತ್ಯಂತ ಭಿನ್ನ ರೀತಿಯ ಅನುಭವಗಳನ್ನು ಅಭಿವ್ಯಕ್ತಿ ಮಾಡಿದವನು ಮಾರ್ಕೆಸ್, ಕನ್ನಡ ಸಾಹಿತ್ಯದಲ್ಲಿ ನವ್ಯ ಹಾಗೂ ನವೋತ್ತರ ಲೇಖಕರು ಇವನ ಕೃತಿಗಳಿಗೆ, ಈತನ ವಿಭಿನ್ನ ಅನುಭವಗಳಿಗೆ ಹಾಗೂ ತಂತ್ರಕ್ಕೆ ಮಾರುಹೋದವರಾಗಿದ್ದರು. ಈ ಸಾಹಿತಿ ನಮ್ಮ ಕಣ್ಮುಂದೆಯೇ 2014 ರವರೆಗೆ ಜೀವಿಸಿದ್ದವನು. 1984 ರಲ್ಲಿ ಸಾಹಿತ್ಯದ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದವನು. ಈತನ `strange pilgrims' ಎನ್ನುವ ಕೃತಿಯು ಇವನ ಕೃತಿ ಸಮೂಹದಲ್ಲೇ ಬಹಳ ಅಪರೂಪದ್ದು. ಇದು ಲ್ಯಾಟಿನ್ ಅಮೆರಿಕಾದ ಪ್ರತಿಭಾವಂತ ಸಾಹಿತಿಯೊಬ್ಬನು ತನ್ನ ಯೂರೋಪ್ ಅನುಭವಗಳನ್ನು ಲ್ಯಾಟಿನ್ ಅಮೆರಿಕಾದ ಮೂಸೆಯಲ್ಲಿಟ್ಟು ರಚಿಸಿರುವಂಥದ್ದು. ಅದೇ ಮಾರ್ಕೆಸ್ ಮಾಂತ್ರಿಕತೆಯನ್ನು ಇಲ್ಲಿಯೂ ಕಾಣಬಹುದಾಗಿದೆ . ಮರಿಯಾ ಡೋಸ್ ಪ್ರಜೆಸ್‌ ಹಾಗೂ ಅಧ್ಯಕ್ಷರೇ ಪ್ರಯಾಣ ಸುಖಕರವಾಗಿರಲಿ' ಎನ್ನುವ ಕಥೆಗಳೇ ನಿದರ್ಶನ .

About the Author

ರಘುನಾಥ ಟಿ.ಎಸ್.
(09 February 1954)

ಲೇಖಕ, ಅನುವಾದಕ ಟಿ.ಎಸ್. ರಘುನಾಥ್ ಅವರು ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ತಾಲೂಕಿನ ತುರುವನೂರಿನವರು. 1976ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು, ನಗರದ ವಿವಿಧ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. 1985ರಿಂದ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ಕಾಲೇಜು ಮಲ್ಲೇಶ್ವರದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಂತರ ಸ್ನಾತಕೋತ್ತರ ಸ್ಥಾಪಕ ಸಂಯೋಜಕರಾಗಿ ಕಾರ್ಯನಿರ್ವಹಿಸಿ 2014ರಲ್ಲಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಪರಂಪರೆ ಬಹು ಮುಖ್ಯವಾಗಿ ಕಥನ ಪರಂಪರೆ ಮತ್ತು  ಸಂಶೋಧನಾ ಅಧ್ಯಯನಗಳಲ್ಲಿ ಆಸಕ್ತಿ ಹೊಂದಿರುವ ಅವರು ಪಾಶ್ಚಾತ್ಯ ಸಾಹಿತ್ಯ ಅದರಲ್ಲೂ ರಷ್ಯನ್ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.  ನಿವೃತ್ತಿಯ ನಂತರ ...

READ MORE

Related Books