ತಂತಿಯ ತುಂಡು ಮತ್ತುಇತರೆ ಯುರೋಪಿಯನ್‌ ಕಥೆಗಳು

Author : ರಘುನಾಥ ಟಿ.ಎಸ್.

Pages 134




Year of Publication: 2021
Published by: ವಂಶಿ ಪಬ್ಲಿಕೇಷನ್ಸ್‌
Address: #4 ಗಾಯತ್ರಿ ಕಾಂಪ್ಲೆಕ್ಸ್‌, ಟಿ.ಬಿ ಬಸ್ಸ್‌ ಸ್ಟಾಪ್‌, ಬಿ.ಎಚ್ಚ್‌ ರೋಡ್, ಸುಭಾಸ್‌ ನಗರ, ನೆಲಮಂಗಲ, ಬೆಂಗಳೂರು- 562123
Phone: 9916595916

Synopsys

ಲೇಖಕ ಹಾಗೂ ಅನುವಾದಕ ಟಿ.ಎಸ್‌ ರಘನಾಥ್‌ ಅವರ ʼತಂತಿಯ ತುಂಡು ಮತ್ತುಇತರೆ ಯುರೋಪಿಯನ್‌ ಕಥೆಗಳುʼ ಒಟ್ಟು 13 ಕಥೆಗಳಿವೆ. ಕಥೆಯ ಮೂಲ ಬೊಕಾಷಿರಾಯನ 13ನೇ ಶತಮಾನದಿಂದ ಪ್ರಾರಂಭಗೊಂಡು 20ನೇ ಶತಮಾನದ ಮಧ್ಯಭಾಗದವರೆಗೂ ವಿಸ್ತ್ರತಗೊಂಡಿದೆ. ಇಲ್ಲಿರುವ ಎಲ್ಲಾ ಕಥೆಗಾರರೂ ಯುರೋಪಿನ ಅತ್ಯಂತ ಜನಪ್ರಿಯ ಇಲ್ಲವೇ ಶ್ರೇಷ್ಠ ಲೇಖಕರಾಗಿದ್ದಾರೆ. ಕಥೆಯೂ ಕಥೆಗಾರರ ವೈಯುಕ್ತಿಕ ಬದುಕುಗಳ ಒಳಹೊಕ್ಕು, ಕೆಲವೊಮ್ಮೆ ತಳಮಳ, ಕೆಲವೊಮ್ಮೆ ವಿಷಾದ, ಮತ್ತೆ ಕೆಲವೊಮ್ಮೆ ದುರಂತ ಛಾಯೆಗಳ ನೆರಳಾಗಿ ಅತೀವ ವ್ಯಥೆ ಕಾಣಿಸಿಕೊಳ್ಳುತ್ತದೆ. ಯುರೋಪಿನ ಪ್ರಮುಖ ಕಥೆಗಾರರಾದಂತಹ ಆಸ್ಕರ್‌ ವೈಲ್ಡ್‌, ಗೈ ಡೇ ಮೊಪಾಸಾ, ಡಿ.ಎಚ್‌. ಲಾರೆನ್ಸ್‌, ಎಮಿಲೀ ಝೋಲಾ, ಫ್ರಾಂಜ್‌ ಕಾಫ್ಕ ಮತ್ತು ವರ್ಜೀನಿಯಾ ಕಥೆಗಳನ್ನು ಆಯ್ಕೆ ಮಾಡಲಾಗಿದ್ದು, ಜಗತ್ತಿನ ಸಾಹಿತಿಗಳು ಎದುರಿಸುವ ಕಷ್ಟ-ನಷ್ಟಗಳನ್ನು, ಆಂತರಿಕ ನೋವುಗಳನ್ನು ಈ ಕೃತಿಯ ಮೂಲಕ ಅರಿಯಬಹುದಾಗಿದೆ.

About the Author

ರಘುನಾಥ ಟಿ.ಎಸ್.
(09 February 1954)

ಲೇಖಕ, ಅನುವಾದಕ ಟಿ.ಎಸ್. ರಘುನಾಥ್ ಅವರು ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ತಾಲೂಕಿನ ತುರುವನೂರಿನವರು. 1976ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು, ನಗರದ ವಿವಿಧ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. 1985ರಿಂದ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ಕಾಲೇಜು ಮಲ್ಲೇಶ್ವರದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಂತರ ಸ್ನಾತಕೋತ್ತರ ಸ್ಥಾಪಕ ಸಂಯೋಜಕರಾಗಿ ಕಾರ್ಯನಿರ್ವಹಿಸಿ 2014ರಲ್ಲಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಪರಂಪರೆ ಬಹು ಮುಖ್ಯವಾಗಿ ಕಥನ ಪರಂಪರೆ ಮತ್ತು  ಸಂಶೋಧನಾ ಅಧ್ಯಯನಗಳಲ್ಲಿ ಆಸಕ್ತಿ ಹೊಂದಿರುವ ಅವರು ಪಾಶ್ಚಾತ್ಯ ಸಾಹಿತ್ಯ ಅದರಲ್ಲೂ ರಷ್ಯನ್ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.  ನಿವೃತ್ತಿಯ ನಂತರ ...

READ MORE

Related Books