ವಿಶ್ವದ ನಾನಾ ಭಾಷೆಯ ಕತೆಗಳನ್ನು ಸೊಂದಲಗೆರೆ ಲಕ್ಷ್ಮೀಪತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಜಮ್ಮು-ಕಾಶ್ಮೀರದಿಂದ ಮಣಿಪುರಿ-ಗುಜರಾತ್ವರೆಗಿನ ಹಾಗೂ ದಕ್ಷಿಣದ ತಮಿಳು-ಮಲೆಯಾಳವರೆಗಿನ ಭಾಷೆಗಳ ಸೊಗಡನ್ನು, ಹಾಗೂ ಆಯಾ ರಾಜ್ಯಗಳ ಸಾಮಾಜಿಕ, ಆರ್ಥಿಕ. ಕೌಟುಂಬಿಕ ಹಿನ್ನೆಲೆಯನ್ನು, ರಾಜಕೀಯ ಸ್ಥಿತಿಗತಿಗಳನ್ನು, ಕನ್ನಡ ಓದುಗರಿಗೆ ಅನಾವರಣ ಮಾಡಿಕೊಡುತ್ತವೆ. ಗುಜರಾತಿ ಭಾಷೆಯ ಕಾಲುದಾರಿ, ನೇಪಾಳಿ ಭಾಷೆಯ ದೋಷಯುಕ್ತ ಕನ್ನಡಕ, ಕಾಶ್ಮೀರಿ ಭಾಷೆಯ ಬಡವನ ಹೆಂಡತಿ ಮುಂತಾದ ಕತೆಗಳು ಇದರಲ್ಲಿವೆ.
ಸೊಂದಲಗೆರೆ ಲಕ್ಷ್ಮಿಪತಿ ಅವರು ಉತ್ತಮ ಅನುವಾದಕರು. ಸ್ವತಃ ಲೇಖಕರು, ಕಥೆಗಾರರು ಆಗಿ ಉತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ ಕೀರ್ತಿ ಇವರಿಗಿದೆ. ಭಾರತೀಯ ಪ್ರಾತಿನಿಧಿಕ ಕತೆಗಳು, ಬೌದ್ಧ ಧರ್ಮದ ಅನನ್ಯತೆ, ಸಾಮ್ರಾಟ ಅಶೋಕ, ಜಗತ್ತಿನ ಉದಾತ್ತ ಚಿಂತಕರು, ಅನ್ಯ ಲೋಕದಲ್ಲಿ ಜೀವಿಗಳಿದ್ದಾರೆಯೇ? ಶ್ರೇಷ್ಠ ಅನುವಾದಿತ ಕಥೆಗಳು ಹೀಗೆ ಅನುವಾದಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ...
READ MORE