ಸತ್ಯ ಮತ್ತು ದೇವರು (ಟಾಲ್ ಸ್ಟಾಯ್ ಕಥೆಗಳು)

Author : ಎಲ್.ಸಿ. ನಾಗರಾಜು

Pages 80

₹ 45.00




Year of Publication: 1999
Published by: ಶಶಿಭಾ ಪಬ್ಲಿಕೇಷನ್ಸ್
Address: # 2, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003

Synopsys

ಸತ್ಯ ಮತ್ತು ದೇವರು -ಟಾಲ್ ಸ್ಟಾಯಿ ಅವರ ಕಥೆಗಳನ್ನು ಅನುವಾದಿಸಿರುವ ಕೃತಿ. ಎಲ್ಸಿ ನಾಗರಾಜು ಅನುವಾದಕರು. 1995ರಲ್ಲಿ ಈ ಕೃತಿಯು ಮೊದಲ ಮುದ್ರಣ ಕಂಡಿದೆ. ಕಥೆ-ಕಾದಂಬರಿಗಳಲ್ಲಿ ಶೋಷಣೆಯನ್ನು ಸ್ಪಷ್ಟವಾಗಿ ಗುರುತಿಸಿ ತೋರುವ, ಬದುಕಿನ ವಾಸ್ತವತೆಯೊಂದಿಗೆ ಅಧ್ಯಾತ್ಮವನ್ನು ಹೇಳುವ, ಮಾನವೀಯ ಕಳಕಳಿಯ ಕಥೆಗಳು ಓದುಗರ ಮೇಲೆ ಧನಾತ್ಮಕ ಪರಿಣಾಮವನ್ನು ಉಂಟು ಮಾಡುತ್ತವೆ ಎಂಬ ಕಾರಣಕ್ಕೆ ಟಾಲ್ ಸ್ಟಾಯ್ ಕಥೆಗಳು ಅನುವಾದ ಸಾಹಿತ್ಯದಲ್ಲಿ ಪ್ರಮುಖ ಸ್ಥಾನ ಪಡೆದಿವೆ.

ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆಯಿಂದಾಗಿ ಹಾಗೂ ಪರಿಣಾಮಕಾರಿ ಅನುವಾದ ಕಲೆಯಿಂದಲೂ ಓದುಗರ ಗಮನ ಸೆಳೆಯುತ್ತದೆ. ಜಗತ್ತಿನ ಆತ್ಮಸಾಕ್ಷಿ ಲಿಯೋ ಟಾಲ್ ಸ್ಟಾಯ್ ಎಂಬ ಅನುವಾದಕರ ಲೇಖನವು ಚಿಂತನಾತ್ಮಕವಾಗಿದೆ. ಪಿಶಾಚಿ ಮತ್ತು ರೊಟ್ಟಿ, ಮನುಷ್ಯನಿಗೆ ಎಷ್ಟು ಭೂಮಿ ಬೇಕು, ಪಿಶಾಚಿಯ ಸೋಲು, ಸೂರತ್ ನಗರದ ಕಾಫಿ ಹೌಸ್ ನಲ್ಲಿ ಕನ್ ಫ್ಯೂಷಿಯಸ್ ವಿದ್ಯಾರ್ಥಿ ಹೇಳಿದ ಕಥೆ, ಕೆಲಸ, ಸಾವು ಮತ್ತು ರೋಗರುಜಿನ, ಮೂವರು ಸಂತರು, ಸತ್ಯ ಮತ್ತು ದೇವರು, ನಗಾರಿ, ಮೂರು ಪ್ರಶ್ನೆಗಳು, ದೇವಪುತ್ರ ಹೀಗೆ ಒಟ್ಟು 10 ಕಥೆಗಳನ್ನು ಅನುವಾದಿಸಲಾಗಿದೆ.

About the Author

ಎಲ್.ಸಿ. ನಾಗರಾಜು

ಹಿರಿಯ ಲೇಖಕ ಎಲ್.ಸಿ. ನಾಗರಾಜು ಅವರು ವೃತ್ತಿಯಿಂದ ಎಂಜಿನಿಯರ್. ‘ಮಕ್ಕಳ ಕಥಾಸರಿತ್ಸಾಗರ’ವನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಸತ್ಯ ಮತ್ತು ದೇವರು (ಟಾಲ್ ಸ್ಟಾಯ್ ಕಥೆಗಳು-ಅನುವಾದ) ...

READ MORE

Related Books