‘ಸಲೀಂ ಅವರ ಕಥೆಗಳು’ ಕಾ. ಹು. ಚಾನ್ ಪಾಷ ಅವರ ಅನುವಾದಿತ ಕತಾಸಂಕಲನವಾಗಿದೆ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಸಲೀಂ ಅವರ ತೆಲುಗು ಕಥೆಗಳನ್ನು ಅನುವಾದಿಸಿದ ಕೃತಿ ಇದು. ಒಟ್ಟು 17 ಕಥೆಗಳಿದ್ದು, ಎಲ್ಲವೂ ಮುಸ್ಲಿಂ ಸಂವೇದನೆಯ ಸಾಮಾಜಿಕ ಕಥೆಗಳಾಗಿವೆ. ಈ ಮುಸ್ಲಿಮರೆಲ್ಲ ಒಂದು ಕಾಲದಲ್ಲಿ ದಲಿತ ಹಿಂದುಳಿದವರಾಗಿದ್ದರು. ಹೊರಗಿನಿಂದ ಬಂದ ಮುಸ್ಲಿಮರು ಇವರನ್ನು ಒತ್ತಾಯದಿಂದ ಮತ ಪರಿವರ್ತನ ಮಾಡಿದಾಗ ಆರ್ಥಿಕ ಸಂಕಷ್ಟಗಳ ಜೊತೆಗೆ ಸಮಸ್ಯೆಗಳು ಅವರ ಜೊತೆಗೆ ಸೇರಿಕೊಂಡವು. ಎಲ್ಲ ಕಾಲಕ್ಕೂ ಮೇಲು - ಸಾಮಾಜಿಕ ಅಂತರ ಧರ್ಮಗಳ, ಬಡವರ ಸಮಸ್ಯೆಗಳಾಗಿ ಮುಂದುವರಿದುಕೊಂಡೇ ಬಂದಿವೆ ಎಂಬ ವಿಷಾದಮಯ ಭಾವ ಕಥೆಗಳುದ್ದಕ್ಕೂ ಕಾಣಬಹುದು.
©2024 Book Brahma Private Limited.